ಆಗ್ರಾ: ವಿಶ್ವ ಪರಂಪರೆಯ ಸಪ್ತಾಹದ ಪ್ರಯುಕ್ತ ಶನಿವಾರ ಆಗ್ರಾ ಕೋಟೆ ಸೇರಿದಂತೆ ಎಲ್ಲ ಸ್ಮಾರಕಗಳಲ್ಲಿ ಪ್ರವಾಸಿಗರಿಗೆ ಉಚಿತವಾಗಿ ಪ್ರವೇಶ ನೀಡಲಾಗಿದೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಇಂದಿನಿಂದ ನವೆಂಬರ್ 25ರವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಆಚರಿಸಲಾಗುತ್ತದೆ.
ಮೊದಲ ದಿನದಿಂದು ತಾಜ್ ಮಹಲ್, ಆಗ್ರಾ ಕೋಟೆ, ಫತೇಪುರ್ ಸಿಕ್ರಿ, ಸಿಕಂದರಾ ಸ್ಮಾರಕ, ಎತ್ಮದುದ್ದೌಲಾ ಸ್ಮಾರಕ ಸೇರಿದಂತೆ ಎಲ್ಲ ಸ್ಮಾರಕಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ಉಚಿತವಾಗಿದೆ. ಆದರೆ, ತಾಜ್ ಮಹಲ್ನ ಮುಖ್ಯ ಸಮಾಧಿಗೆ ಬೇಟಿ ನೀಡಲು 200 ಟಿಕೆಟ್ ನಿಗದಿಪಡಿಸಲಾಗಿದೆ. ಇದೆ ಮೊದಲ ಬಾರಿ ಈ ವ್ಯವಸ್ಥೆ ಮಾಡಲಾಗಿದೆ.
ವಾರಾಂತ್ಯ ಇರುವ ಕಾರಣದಿಂದ ಹೆಚ್ಚು ಜನರು ಸೇರುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಎಎಸ್‌ಐ, ಸಿಐಎಸ್‌ಎಫ್ ಮತ್ತು ಜಿಲ್ಲಾಡಳಿತ ಈ ಬಗ್ಗೆ ವ್ಯಾಪಕ ವ್ಯವಸ್ಥೆ ಮಾಡಿದೆ ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಹೇಳಿದ್ದಾರೆ. ತಾಜ್ ಮಹಲ್ ನೋಡಲು ಬರುವ ಭಾರತೀಯ ಪ್ರವಾಸಿಗರು 50 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರು 1100 ರೂಪಾಯಿ ಟಿಕೆಟ್ ಖರೀದಿಸಬೇಕಾಗಿಲ್ಲ, ಮುಖ್ಯ ಗುಮ್ಮಟಕ್ಕೆ ಭೇಟಿ ನೀಡಲು ಪ್ರವಾಸಿಗರು 200 ರೂಪಾಯಿ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ.