ಕರ್ನಾಟಕ

karnataka

ETV Bharat / bharat

World Heart Day 2023: ಇಂದು ಹೃದಯ ದಿನ... ಏಕೆ, ಏನಿದರ ವಿಶೇಷತೆ? - ವಿಶ್ವ ಹೃದಯ ದಿನದ ಥೀಮ್ 2023

World Heart Day: ನಮ್ಮ ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೆ ಜೀವನ. ನಮ್ಮ ಹೃದಯ ಸದಾ ಆರೋಗ್ಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ನಮ್ಮ ಹೃದಯಕ್ಕೂ ಒಂದು ದಿನವಿದೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

Representative image
ಪ್ರಾತಿನಿಧಿಕ ಚಿತ್ರ

By ETV Bharat Karnataka Team

Published : Sep 29, 2023, 7:25 AM IST

ವಿಶ್ವ ಹೃದಯ ದಿನ 2023: ಹೃದಯ ಮಾನವನ ದೇಹದ ಪ್ರಮುಖ ಅಂಗ. ಹಾಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ದೈಹಿಕ ಕ್ರಿಯೆಗಳನ್ನು ಸಂಘಟಿಸುವ ನಿರ್ಣಾಯಕ ಅಂಗವಾ. ಹೃದಯದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಅಡಚಣೆಯಾದರೂ ಅದು ವ್ಯಕ್ತಿಯ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹಾಗಾಗಿ ಹೃದಯ ಆರೋಗ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆ.29ರಂದು 'ವಿಶ್ವ ಹೃದಯ ದಿನ'ವನ್ನು ಆಚರಿಸಲಾಗುತ್ತದೆ.

ವಿಶ್ವ ಹೃದಯ ದಿನದ ಇತಿಹಾಸ:ವಿಶ್ವ ಹೃದಯ ದಿನವನ್ನು ಮೊದಲ ಬಾರಿಗೆ 2000ರಲ್ಲಿ ಆಚರಿಸಲಾಯಿತು. ವರ್ಲ್ಡ್ ಹಾರ್ಟ್ ಫೆಡರೇಶನ್ ಮಾಜಿ ಅಧ್ಯಕ್ಷ ಆಂಟೋನಿ ಬೇಯೆಸ್ ಡಿ. ಲೂನಾ ಅವರು ವಿಶ್ವ ಹೃದಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಪರಿಚಯಿಸಿದರು. ಇದು ಇಂದು ವರ್ಲ್ಡ್ ಹಾರ್ಟ್ ಫೆಡರೇಶನ್ ಪ್ರಾರಂಭಿಸಿದ ವಾರ್ಷಿಕ ಜಾಗತಿಕ ಆಚರಣೆಯಾಗಿ ಬೆಳೆದಿದೆ. 2012ರಲ್ಲಿ, ಜಾಗತಿಕ ನಾಯಕರು ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, 2025ರ ವೇಳೆಗೆ ಸಾಂಕ್ರಾಮಿಕವಲ್ಲದ ರೋಗಗಳಿಂದ ಮರಣ ಪ್ರಮಾಣವನ್ನು 25 ಪ್ರತಿಶತದಷ್ಟು ಕಡಿಮೆ ಮಾಡಲು ಬದ್ಧರಾಗಿದ್ದಾರೆ.

ಪ್ರಾಮುಖ್ಯತೆ:ಹೃದಯಾಘಾತ ಮತ್ತು ಆರೋಗ್ಯ ಸಂಬಂಧಿತ ತೊಡಕುಗಳಿಗೆ ಸಂಬಂಧಿಸಿದ ಮಾಹಿತಿಯ ನೀಡುವುದು ಇದರ ಮುಖ್ಯ ಉದ್ದೇಶ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯು ಎಲ್ಲಾ ವಯಸ್ಸಿನ ವ್ಯಕ್ತಿಗಳನ್ನು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುವಂತೆ ಮಾಡಿದೆ. ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವ್ಯಕ್ತಿಗಳಿಗೆ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತದೆ.

ಹೃದಯ ರಕ್ತನಾಳದ ಕಾಯಿಲೆಗಳು (CVD) ಪ್ರಚಲಿತವಾಗಿರುವ ಜಾಗತಿಕ ಆರೋಗ್ಯಕ್ಕೆ ಸವಾಲಾಗಿವೆ. ಅನೇಕ ಅಮೂಲ್ಯ ಜೀವಗಳನ್ನು ಬಲಿ ಪಡೆಯುತ್ತಿದೆ. ಶೇ.80ರಷ್ಟು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ಪ್ರಾಥಮಿಕವಾಗಿ ಕಳಪೆ ಆಹಾರ, ವ್ಯಾಯಾಮದ ಕೊರತೆ ಮತ್ತು ಧೂಮಪಾನದಂತಹ ಜೀವನಶೈಲಿಯ ಆಯ್ಕೆಗಳಿಂದ ಈ ಸಮಸ್ಯೆ ಉದ್ಭವಿಸುತ್ತಿದೆ.

ವಿಶ್ವ ಹೃದಯ ದಿನದ ಉದ್ದೇಶ: ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನವನ್ನು ಆಚರಿಸುವ ಪ್ರಮುಖ ಉದ್ದೇಶ. ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮತ್ತು ಅವುಗಳ ತಡೆಗಟ್ಟುವಿಕೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಪ್ರಧಾನ ಉದ್ದೇಶವಾಗಿದೆ.

ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹೃದಯ ರಕ್ತನಾಳಗಳ ಕಾಯಿಲೆ ಪ್ರತಿ ವರ್ಷ 17.9 ವಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ವರ್ಲ್ಡ್ ಹಾರ್ಟ್ ಫೆಡರೇಷನ್ ಪ್ರಕಾರ ಶೇ.80ರಷ್ಟು ಅಕಾಲಿಕ ಮರಣ ಹೃದಯ ರಕ್ತನಾಳಗಳ ಕಾಯಿಲೆಯಿಂದಾಗಿ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಅದನ್ನು ನಿಯಂತ್ರಿಸಲು ಜನರು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹೃದಯ ದಿನದ ಥೀಮ್ 2023:ಪ್ರತಿ ವರ್ಷ ಒಂದು ನಿರ್ದಿಷ್ಟ ಥೀಮ್ ಅನ್ನು ಅಳವಡಿಸಿಕೊಳ್ಳಲಾಗುತ್ತದೆ. "ಹೃದಯ ಬಳಸಿ, ಹೃದಯದ ಬಗ್ಗೆ ತಿಳಿದುಕೊಳ್ಳಿ" ಎಂಬುವುದು 2023ರ ಥೀಮ್‌. ಇದು ಸ್ವಯಂ ಆರೈಕೆ ಮತ್ತು ಹೃದಯದ ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ.

ವರ್ಲ್ಡ್ ಹಾರ್ಟ್ ಫೆಡರೇಶನ್ ಬಗ್ಗೆ:ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನೆಲೆಗೊಂಡಿರುವ ವರ್ಲ್ಡ್ ಹಾರ್ಟ್ ಫೆಡರೇಶನ್ ಜಾಗತಿಕ ಹೃದಯ ರಕ್ತನಾಳದ ಸಮುದಾಯವನ್ನು ಪ್ರತಿನಿಧಿಸುತ್ತದೆ. 1972ರಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಕಾರ್ಡಿಯಾಲಜಿಯಾಗಿ ಸ್ಥಾಪಿಸಲಾಯಿತು. ಇದು 1978ರಲ್ಲಿ ಇಂಟರ್ನ್ಯಾಷನಲ್ ಕಾರ್ಡಿಯಾಲಜಿ ಫೆಡರೇಶನ್‌ನೊಂದಿಗೆ ವಿಲೀನಗೊಂಡಿತು. ಅಂತಿಮವಾಗಿ 1998ರಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ ಆಗಿ ವಿಕಸನಗೊಂಡಿತು. 200ಕ್ಕೂ ಹೆಚ್ಚು ವೈಜ್ಞಾನಿಕ ಸಂಸ್ಥೆಗಳು ಮತ್ತು 100ಕ್ಕೂ ಹೆಚ್ಚು ದೇಶಗಳ ನಾಗರಿಕ ಸಮಾಜ ಮತ್ತು ರೋಗಿಗಳ ಸಂಸ್ಥೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ:ಸೆ.29 ವಿಶ್ವ ಹೃದಯ ದಿನ: ಕಾರ್ಡಿಯಾಕ್ ಅರೆಸ್ಟ್ ಅಪಾಯ.. ಇರಲಿ ಎಚ್ಚರ

ABOUT THE AUTHOR

...view details