ಅಹಮದಾಬಾದ್ : ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ಪತ್ನಿ ವಿನಿ ರಾಮನ್ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವನ್ನು ಹುರಿದುಂಬಿಸಿದಕ್ಕಾಗಿ ಭಾರತೀಯ ಅಭಿಮಾನಿಗಳಿಂದ ದ್ವೇಷದ ಸಂದೇಶವನ್ನು ಸ್ವೀಕರಿಸಿದ್ದಾರೆ. ಭಾನುವಾರ ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತ ಹೀನಾಯ ಸೋಲಿನ ನಂತರ ಅಭಿಮಾನಿಗಳು ಈ ರೀತಿಯ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಒಬ್ಬ ಭಾರತೀಯನಾಗಬಹುದು ಮತ್ತು ತಾನು ಹುಟ್ಟಿದ ಆಸ್ಟ್ರೇಲಿಯಾವನ್ನು ಉಲ್ಲೇಖಿಸಿ, ಹುಟ್ಟಿದ ದೇಶವನ್ನು ಬೆಂಬಲಿಸಬಹುದು ಎಂದು ವಿನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀವು ಭಾರತೀಯರಾಗಿರುತ್ತೀರಿ ಮತ್ತು ನೀವು ಬೆಳೆದ ದೇಶವನ್ನು ಬೆಂಬಲಿಸಬಹುದು. ಮುಖ್ಯವಾಗಿ ನಿಮ್ಮ ಪತಿ + ತಂದೆ ತಂಡವನ್ನು ಬೆಂಬಲಿಸಬಹುದು. ನಿಮ್ಮ ಮಗು #ನೋಬ್ರೇನರ್ನಲ್ಲಿ ಆಡಿದರೆ ಚಿಲ್ ಮಾತ್ರೆ ತೆಗೆದುಕೊಳ್ಳಿ. ಹೆಚ್ಚು ಪ್ರಮುಖವಾದ ಪ್ರಪಂಚದ ಸಮಸ್ಯೆಗಳ ಕಡೆಗೆ ಆಕ್ರೋಶವನ್ನು ವ್ಯಕ್ತಪಡಿಸಿ " ಎಂದು ವಿನಿ ಇಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದಿದ್ದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಭಾರತ ತಂಡವನ್ನು ಆಲೌಟ್ ಮಾಡಿದ್ದರಿಂದ ಲಕ್ಷಾಂತರ ಭಾರತೀಯರು ಎದೆಗುಂದಿದರು. ವಿನಿ ಅವರ ಪೋಷಕರು ತಮಿಳುನಾಡಿನವರು, ಹುಟ್ಟಿ ಬೆಳೆದದ್ದು ಮೆಲ್ಬೋರ್ನ್ನಲ್ಲಿ. ಈ ಕಾರಣಕ್ಕಾಗಿ ಭಾರತೀಯ ಅಭಿಮಾನಿಗಳು ವಿನಿ ಅವರನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿ, ಇದು ತಾನು ಹುಟ್ಟಿ ಬೆಳೆದ ದೇಶ ಎಂದು ವಿವರಿಸಿದ್ದಾರೆ.