ಕರ್ನಾಟಕ

karnataka

ETV Bharat / bharat

ವಿಶ್ವದ ಅತಿದೊಡ್ಡ ವೀಲ್‌ಚೇರ್ ಕ್ರಿಕೆಟ್​ ಚಾಂಪಿಯನ್‌ಶಿಪ್ ರಾಜಸ್ಥಾನದಲ್ಲಿ ಆರಂಭ

ರಾಜಸ್ಥಾನದ ಉದಯಪುರನಲ್ಲಿ ವಿಶ್ವದ ಅತಿ ದೊಡ್ಡ ವೀಲ್‌ಚೇರ್ ಕ್ರಿಕೆಟ್​ ಚಾಂಪಿಯನ್‌ಶಿಪ್ ಆರಂಭವಾಗಿದೆ.

World's largest wheelchair cricket championship begins in Udaipur, Rajasthan
ರಾಜಸ್ಥಾನದ ಉದಯಪುರನಲ್ಲಿ ವಿಶ್ವದ ಅತಿ ದೊಡ್ಡ ವೀಲ್‌ಚೇರ್ ಕ್ರಿಕೆಟ್​ ಚಾಂಪಿಯನ್‌ಶಿಪ್ ಆರಂಭ

By

Published : Nov 28, 2022, 1:28 PM IST

ಉದಯಪುರ (ರಾಜಸ್ಥಾನ):ನಾರಾಯಣ ಸೇವಾ ಸಂಸ್ಥಾನ, ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ವೀಲ್‌ಚೇರ್ ಕ್ರಿಕೆಟ್ ಇಂಡಿಯಾ ಅಸೋಸಿಯೇಷನ್‌ನ ಜಂಟಿ ಆಶ್ರಯದಲ್ಲಿ ಹಾಗೂ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಬೆಂಬಲದೊಂದಿಗೆ 3ನೇ ರಾಷ್ಟ್ರೀಯ ವೀಲ್‌ಚೇರ್ ಕ್ರಿಕೆಟ್ ಚಾಂಪಿಯನ್‌ಶಿಪ್ ಆರಂಭಗೊಂಡಿತು. ವಿಶ್ವದ ಅತಿದೊಡ್ಡ ವೀಲ್‌ಚೇರ್ ಕ್ರಿಕೆಟ್​ ಚಾಂಪಿಯನ್‌ಶಿಪ್ ಇದಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಟಿಕಾ ರಾಮ್ ಜೂಲಿ ಮತ್ತು ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿಯ ಅಧ್ಯಕ್ಷ ಡಾ.ಕೃಷ್ಣ ಪೂನಿಯಾ ಅವರ ಉದ್ಘಾಟನಾ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಅತಿಥಿಗಳು ಮತ್ತು ತಂಡಗಳನ್ನು ಸ್ವಾಗತಿಸಿದ ಸಂಸ್ಥಾನದ ಸಂಸ್ಥಾಪಕ ಪದ್ಮಶ್ರೀ ಕೈಲಾಶ್ ಮಾನವ್ ಡಿಸಿಸಿಐಗೆ ಕೃತಜ್ಞತೆ ಸಲ್ಲಿಸಿ ಈ ಚಾಂಪಿಯನ್‌ಶಿಪ್ ರಾಜಸ್ಥಾನಕ್ಕೆ ಹೆಮ್ಮೆ ತರುವಂಥದ್ದು ಎಂದು ಹೇಳಿದರು.

ಚಾಂಪಿಯನ್‌ಶಿಪ್ ಕುರಿತು ಮಾಹಿತಿ ನೀಡಿದ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್, ಉದಯಪುರದಲ್ಲಿ ಆಯೋಜಿಸಿರುವ ವಿವಿಧ ಕ್ರೀಡೆಗಳ 4ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಇದಾಗಿದ್ದು, ಇದಕ್ಕೂ ಮೊದಲು ಒಂದು ಬಾರಿ ಅಂಧರ ಕ್ರಿಕೆಟ್ ಮತ್ತು ಎರಡು ಬಾರಿ ಪ್ಯಾರಾ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು ಎಂದರು. ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ.ಜಿ.ಅಲೆ ಶರ್ಮಾ ಮಾತನಾಡಿ, ಸಂಪನ್ಮೂಲಗಳು ಮುಖ್ಯವಲ್ಲ, ಉದ್ದೇಶಗಳು ಮುಖ್ಯ. ಜೀವನದಲ್ಲಿ ಹೋರಾಟಗಳು ಬರುತ್ತವೆ, ಆದರೆ ದಾರಿ ಮಾಡಿಕೊಡುವವರು ವಿಭಿನ್ನ ವ್ಯಕ್ತಿಗಳು ಮತ್ತು ಅವರಲ್ಲಿ ನೀವು ಪ್ರಮುಖರು ಎಂದು ಹುರಿದುಂಬಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಅವರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳ ನಾಯಕರು ಮತ್ತು ಆಟಗಾರರನ್ನು ಭೇಟಿ ಮಾಡಿದರು. ಜೀವನದ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವಿದೆ. ಆಟಗಾರರ ವಿಶೇಷ ಸಾಮರ್ಥ್ಯಗಳನ್ನು ವಿವರಿಸಿ ವಿವಿಧ ಕ್ಷೇತ್ರಗಳಲ್ಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಚಾಂಪಿಯನ್‌ಶಿಪ್‌ನ ಪ್ರತಿಯೊಂದು ಪಂದ್ಯವನ್ನು ಕ್ರೀಡಾ ಮನೋಭಾವದಿಂದ ಆಡುವಂತೆ ಮನವಿ ಮಾಡಿ ಶುಭ ಹಾರೈಸಿದರು.

ಇದನ್ನೂ ಓದಿ:ಅಂಧರ ಟಿ20 ವಿಶ್ವಕಪ್ ಕ್ರಿಕೆಟ್​.. ಬೆಂಗಳೂರಲ್ಲಿ ಟೂರ್ನಿಗೆ ಭರ್ಜರಿ ಸಿದ್ಧತೆ

ABOUT THE AUTHOR

...view details