ಕರ್ನಾಟಕ

karnataka

ETV Bharat / bharat

ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್​ - ಹಣಕಾಸು ವರ್ಷ

ಭಾರತದ ಅಂದಾಜು ಜಿಡಿಪಿ (ದೇಶದ ನಿವ್ವಳ ಆರ್ಥಿಕ ವೃದ್ಧಿ ದರ) ಏರಿಕೆಯನ್ನು ವಿಶ್ವಬ್ಯಾಂಕ್​​ ಪರಿಷ್ಕರಿಸಿದೆ.

World Bank revises upwards India's GDP growth forecast to 6.9% for FY23
ಭಾರತದ ಜಿಡಿಪಿ ಬೆಳವಣಿಗೆ ಶೇ.6.9ಕ್ಕೆ ಏರಿಕೆ: ವಿಶ್ವಬ್ಯಾಂಕ್​​ ಮುನ್ಸೂಚನೆ

By

Published : Dec 6, 2022, 3:22 PM IST

ನವ ದೆಹಲಿ: 2022-23ರ ಹಣಕಾಸು ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.9ಕ್ಕೆ ಏರಿಕೆಯಾಗುವ ಮುನ್ಸೂಚನೆಯನ್ನು ವಿಶ್ವಬ್ಯಾಂಕ್​​ ನೀಡಿದೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಈ ಬೆಳವಣಿಗೆಯು ಶೇ.7.5ರಿಂದ 6.5ಕ್ಕೆ ಕುಸಿಯುವ ಮುನ್ಸೂಚನೆ ನೀಡಿತ್ತು. ಇದೀಗ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವಬ್ಯಾಂಕ್​ ತಿಳಿಸಿದೆ.

ಹಣದುಬ್ಬರ ಶೇ 7.1 ನಿರೀಕ್ಷೆ: ಜಾಗತಿಕ ಪರಿಣಾಮಗಳ ನಡುವೆಯೂ ದೇಶದ ಆರ್ಥಿಕತೆ ಹೆಚ್ಚು ಚೇತರಿಸಿಕೊಳ್ಳುತ್ತಿದೆ. ಜೊತೆಗೆ ನಿರೀಕ್ಷೆಗಿಂತ ಉತ್ತಮವಾಗಿ ಆರ್ಥಿಕಾಭಿವೃದ್ಧಿ ಸಾಧ್ಯತೆ ಇದೆ ಎಂದಿದೆ. 2022-23ರಲ್ಲಿ ಜಿಡಿಪಿಯು ಶೇ 6.4ರಷ್ಟು ವಿತ್ತೀಯ ಕೊರತೆಯ ಗುರಿ ಪೂರೈಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 7.1ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಇದನ್ನೂ ಓದಿ:ಸಾಫ್ಟ್‌ವೇರ್‌, ಇತರೆ ಸೇವೆಗಳ ದರ ಹೆಚ್ಚಿಸಿದ ಮೈಕ್ರೋಸಾಫ್ಟ್​ ಇಂಡಿಯಾ

ABOUT THE AUTHOR

...view details