ವಾಷಿಂಗ್ಟನ್, ಅಮೆರಿಕ: ಭಾರತದಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಬಹುತೇಕ ಮಂದಿ ಕೋವಿಡ್ನಿಂದ ತತ್ತರಿಸಿದ್ದು, ಅವರಿಗಾಗಿ ಸುಮಾರು 500 ಮಿಲಿಯನ್ ಡಾಲರ್ ಸಾಲ ಮಂಜೂರು ಮಾಡಿರುವುದಾಗಿ ವಿಶ್ವಬ್ಯಾಂಕ್ ಸ್ಪಷ್ಟನೆ ನೀಡಿದೆ.
ಭಾರತದ ಕರೆನ್ಸಿಯಲ್ಲಿ ವಿಶ್ವಬ್ಯಾಂಕ್ ಮಂಜೂರು ಮಾಡಿರುವ ಸಾಲ ಸುಮಾರು 3,700 ಕೋಟಿ ರೂಪಾಯಿಗಳಿಗೂ ಹೆಚ್ಚಿರಲಿದ್ದು, ಕೊರೊನಾವನ್ನು ಮತ್ತು ಮುಂಬರುವ ಸಂಕಷ್ಟನ್ನು ಎದುರಿಸಲು ಈ ಸಾಲ ಸಹಾಯ ಮಾಡಲಿದೆ.
ಈ ಸಾಲ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಅಸಂಘಟಿತ ಕಾರ್ಮಿಕರಿಗಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಸಾಮರ್ಥ್ಯವನ್ನು ಬಲಿಷ್ಠಗೊಳಿಸುತ್ತದೆ ಮತ್ತು ಸಾಮಾಜಿಕ ರಕ್ಷಣಾ ವ್ಯವಸ್ಥೆಗೆ ಸಹಕರಿಸುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ.