ನವದೆಹಲಿ:ಭಾರತಕ್ಕೆ ಎಸ್ - 400 ಕ್ಷಿಪಣಿಯನ್ನು ಆದಷ್ಟು ಬೇಗ ನೀಡುವ ಸಲುವಾಗಿ ನಾವು ತುಂಬಾ ಶ್ರಮಪಟ್ಟು ಕಾರ್ಯನಿರ್ವಹಿಸುತ್ತೇವೆ ಎಂದು ರಷ್ಯಾ ಗುರುವಾರ ಹೇಳಿದೆ. ಅಲ್ಲದೇ ಮೊದಲನೇ ಬ್ಯಾಚ್ನ ಶಸ್ತ್ರಾಸ್ತ್ರಗಳನ್ನು ಮುಂದಿನ ವರ್ಷದ ಅಂತ್ಯದೊಳಗೆ ನೀಡಲಾಗುವುದು ಎಂದಿದೆ.
ಆನ್‌ಲೈನ್ ಮೂಲಕ ಮಾಧ್ಯಮದೊಂದಿಗೆ ಮಾತನಾಡಿದ ರಷ್ಯಾದ ಡೆಪ್ಯೂಟಿ ಚೀಫ್ ಆಫ್ ಮಿಷನ್ ರೋಮನ್ ಬಾಬುಷ್ಕಿನ್ ಅವರು, ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದದಲ್ಲಿ ಕೆಲಸ ಮಾಡಲಾಗುತ್ತಿದೆ. ಬಹು - ಶತಕೋಟಿ ಡಾಲರ್ ಒಪ್ಪಂದವನ್ನು ಮುಗಿಸುವ ಹಂತದಲ್ಲಿದ್ದೇವೆ. ಇದರ ಅಡಿ ಇಂಡೋ - ರಷ್ಯಾದ ಜಂಟಿ ಉದ್ಯಮವು 200 ಕಮೋವ್ ಕಾ - 226 ಟಿ ದಾಳಿ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆ ಸೇರಲಿವೆ ಎಂದರು.
ಭಾರತ ಮತ್ತು ಯುಎಸ್ ನಡುವೆ ಸಹಿ ಹಾಕಿದ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ (ಬಿಇಸಿಎ) ಭಾರತೀಯ ಸಶಸ್ತ್ರ ಪಡೆಗಳಿಂದ ರಷ್ಯಾ ಮೂಲದ ವೇದಿಕೆಗಳ ಕಾರ್ಯಾಚರಣೆಯಲ್ಲಿ ಭದ್ರತಾ ಪರಿಣಾಮಗಳನ್ನು ಬೀರುತ್ತದೆಯೇ ಎಂದು ಕೇಳಿದಾಗ, ಬಾಬುಷ್ಕಿನ್ ನೇರ ಉತ್ತರವನ್ನು ನೀಡಲಿಲ್ಲ.
ಕಳೆದ ತಿಂಗಳು ಭಾರತ ಮತ್ತು ಯುಎಸ್ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಜಿಯೋಸ್ಪೇಷಿಯಲ್ ನಕ್ಷೆಗಳು ಮತ್ತು ವರ್ಗೀಕೃತ ಉಪಗ್ರಹ ದತ್ತಾಂಶಗಳನ್ನು ಹಂಚಿಕೊಳ್ಳಲು ಒದಗಿಸುವ ಹೆಗ್ಗುರುತು BECA ಒಪ್ಪಂದಕ್ಕೆ ಸಹಿ ಹಾಕಿದವು. ಈ ಸಮಯದಲ್ಲಿ ಗಡುವು ಬದಲಾಯಿಸಲಾಗುವುದಿಲ್ಲ. ಮೊದಲ ಬ್ಯಾಚ್ ಅನ್ನು 2021 ರ ಅಂತ್ಯದ ವೇಳೆಗೆ ಪೂರೈಸುವ ನಿರೀಕ್ಷೆಯಿದೆ. ಅದಕ್ಕಾಗಿ ನಾವು ತುಂಬಾ ಶ್ರಮಿಸುತ್ತಿದ್ದೇವೆ ಎಂದರು.
ಅಕ್ಟೋಬರ್ 2018 ರಲ್ಲಿ, ಎಸ್ - 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ 5 ಬಿಲಿಯನ್ ಯುಎಸ್ಡಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಕಳೆದ ವರ್ಷ, ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತವು ರಷ್ಯಾಕ್ಕೆ ಸುಮಾರು 800 ಮಿಲಿಯನ್ ಡಾಲರ್ಗಳನ್ನು ಪಾವತಿಸಿತು. ಎಸ್ - 400 ಅನ್ನು ರಷ್ಯಾದ ಅತ್ಯಾಧುನಿಕ ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಂದು ಕರೆಯಲಾಗುತ್ತದೆ.