ಕರ್ನಾಟಕ

karnataka

ETV Bharat / bharat

ವಿಶೇಷ ಆರ್ಥಿಕ ವಲಯಗಳಿಗೆ 'ವರ್ಕ್​ ಫ್ರಮ್ ಹೋಂ' ಮಾರ್ಗಸೂಚಿ​ ಬಿಡುಗಡೆ - ವರ್ಕ್ ಫ್ರಮ್ ಹೋಮ್ ಕಾಯ್ದೆ

ದೇಶಾದ್ಯಂತ ಇರುವ ವಿಶೇಷ ಆರ್ಥಿಕ ವಲಯಗಳಲ್ಲಿ, WFH ಕುರಿತಂತೆ ಏಕರೂಪದ ನೀತಿ-ನಿಯಮಗಳನ್ನು ರೂಪಿಸುವಂತೆ ಉದ್ಯಮ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ಉದ್ಯಮವೊಂದರ ನಿರ್ದಿಷ್ಟ ವರ್ಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಹೊಸ ನಿಯಮಗಳು ಅನ್ವಯಿಸಲಿವೆ.

ವರ್ಕ್​ ಫ್ರಮ್ ಹೋಂ' ಮಾರ್ಗಸೂಚಿ
Work From Home Rules Announced By Commerce Ministry

By

Published : Jul 20, 2022, 12:02 PM IST

ನವದೆಹಲಿ: ವಿಶೇಷ ಆರ್ಥಿಕ ವಲಯಗಳಲ್ಲಿನ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ಅವಧಿಗೆ ವರ್ಕ್ ಫ್ರಮ್ ಹೋಮ್ (WFH- ಮನೆಯಿಂದ ಕೆಲಸ ಮಾಡುವುದು) ನೀಡಬಹುದು ಮತ್ತು ಒಟ್ಟು ಉದ್ಯೋಗಿಗಳ ಪೈಕಿ ಶೇ 50ರಷ್ಟು ಜನರಿಗೆ ಈ ಸೌಲಭ್ಯ ನೀಡಬಹುದು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ವಿಶೇಷ ಆರ್ಥಿಕ ವಲಯ,2006 ಕಾಯ್ದೆಯಡಿ ಸ್ಥಾಪಿಸಲ್ಪಟ್ಟ ವಿಶೇಷ ಆರ್ಥಿಕ ವಲಯಗಳಿಗಾಗಿ ವಾಣಿಜ್ಯ ಸಚಿವಾಲಯವು ರೂಲ್ 43A ಅಧಿಸೂಚನೆ ಹೊರಡಿಸಿದೆ.

ದೇಶಾದ್ಯಂತ ಇರುವ ವಿಶೇಷ ಆರ್ಥಿಕ ವಲಯಗಳಲ್ಲಿ, WFH ಕುರಿತಂತೆ ಏಕರೂಪದ ನೀತಿ-ನಿಯಮಗಳನ್ನು ರೂಪಿಸುವಂತೆ ಉದ್ಯಮ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ಉದ್ಯಮವೊಂದರ ನಿರ್ದಿಷ್ಟ ವರ್ಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಹೊಸ ನಿಯಮಗಳು ಅನ್ವಯಿಸಲಿವೆ.

ಹೊಸ ನಿಯಮಗಳು IT/ITeS SEZ ವಲಯದ ಉದ್ಯೋಗಿಗಳಿಗೆ ಕೂಡ ಅನ್ವಯಿಸಲಿವೆ. ಕೆಲಸ ಮಾಡಲು ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಪ್ರಯಾಣದಲ್ಲಿರುವ ಉದ್ಯೋಗಿಗಳು ಮತ್ತು ಆಫ್​ಸೈಟ್​ ಉದ್ಯೋಗಿಗಳಿಗೆ ಸಹ WFH ಹೊಸ ನಿಯಮಗಳು ಅನ್ವಯಿಸಲಿವೆ. ಘಟಕದಲ್ಲಿರುವ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು ಉದ್ಯೋಗಿಗಳಲ್ಲಿ ಗರಿಷ್ಠ ಶೇಕಡಾ 50 ರಷ್ಟು ಉದ್ಯೋಗಿಗಳಿಗೆ WFH ಅನ್ನು ವಿಸ್ತರಿಸಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಪ್ರಸ್ತುತ ಗರಿಷ್ಠ ಒಂದು ವರ್ಷಕ್ಕೆ WFH ನೀಡಬಹುದು ಹಾಗೂ ಅದರ ನಂತರ ಆಯಾ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಅದನ್ನು ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಬಹುದು ಎಂದು ತಿಳಿಸಲಾಗಿದೆ.

ಈಗಾಗಲೇ ಮನೆಯಿಂದ ಕೆಲಸ ಮಾಡುತ್ತಿರುವ SEZ ಉದ್ಯೋಗಿಗಳ ಬಗ್ಗೆ ಅನುಮೋದನೆ ಪಡೆಯಲು 90 ದಿನಗಳ ಕಾಲಾವಕಾಶ ನೀಡಲಾಗಿದೆ. SEZ ಘಟಕಗಳು ಮನೆಯಿಂದ ಕೆಲಸ ಮಾಡುವ ಉದ್ಯೋಗಗಳಿಗೆ ಕೆಲಸಕ್ಕೆ ಅಗತ್ಯವಾದ ಉಪಕರಣಗಳನ್ನು ಮತ್ತು ಸುರಕ್ಷಿತ ಕನೆಕ್ಟಿವಿಟಿ ಸಂಪರ್ಕಗಳನ್ನು ನೀಡಬೇಕು ಮತ್ತು ಘಟಕದ ಉಪಕರಣಗಳನ್ನು ಹೊರಗೆ ತೆಗೆದುಕೊಂಡು ಹೋಗಲು ಉದ್ಯೋಗಿಗೆ ನೀಡಲಾದ ಅನುಮತಿಯು ಅಂತಿಮವಾಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ನಿರ್ದಿಷ್ಟ ಕಾರಣವಿದ್ದಲ್ಲಿ ಲಿಖಿತ ಅನುಮತಿಯನ್ನು ಪಡೆದುಕೊಂಡು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯನ್ನು ಶೇ 50ರ ಮೇಲ್ಪಟ್ಟು ಹೆಚ್ಚಿಸಿಕೊಳ್ಳಬಹುದು.

ABOUT THE AUTHOR

...view details