ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದ 2014ಕ್ಕೂ ಮೊದಲು ಹತ್ಯೆ(ಲಿಂಚಿಂಗ್) ಎಂಬ ಪದವು ಪ್ರಾಯೋಗಿಕವಾಗಿ ಕೇಳಿರಲಿಲ್ಲ. ಧನ್ಯವಾದ ಮೋದಿಜಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ರಾಹುಲ್ ಟ್ವೀಟ್ ಮಾಡಿದ್ದಾರೆ. ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ್ ಕಿ ದಲಾಲಿ ಮತ್ ಕರೋ (ಬಿಜೆಪಿಗೆ ಮಧ್ಯಸ್ಥಿಕೆ ಮಾಡಬೇಡಿ) ಎಂದು ಹೇಳಿದ್ದಾರೆ. ನಿನ್ನೆ ಟ್ವೀಟ್‌ಗೆ ಬಿಜೆಪಿ ತಿರಗೇಟು ನೀಡಿದೆ ಎಂಬ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ರಾಹುಲ್ ಗಾಂಧಿ ತಮ್ಮ ತಾಳ್ಮೆ ಕಳೆದುಕೊಂಡ ಪ್ರಸಂಗವೂ ನಡೆದಿದೆ.