ನವದೆಹಲಿ: ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾದ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ರಾಜಕೀಯಕ್ಕೆ ಸೇರುತ್ತಾರೆ ಎನ್ನಲಾಗುತ್ತಿತ್ತು. ಈ ಕುರಿತು ಇದೀಗ ಸ್ವತಃ ಫೈಸಲ್ ಪಟೇಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯಕ್ಕೆ ಸೇರುವ ಆಸೆ ಕೈ ಬಿಟ್ಟ ಫೈಸಲ್ ಪಟೇಲ್ - Ahmed Patel's son Faisal
ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಗಾಳಿಸುದ್ದಿ ಹಬ್ಬಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಫೈಸಲ್ ಪಟೇಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
![ರಾಜಕೀಯಕ್ಕೆ ಸೇರುವ ಆಸೆ ಕೈ ಬಿಟ್ಟ ಫೈಸಲ್ ಪಟೇಲ್ ಫೈಸಲ್ ಪಟೇಲ್](https://etvbharatimages.akamaized.net/etvbharat/prod-images/768-512-10433423-thumbnail-3x2-lek.jpeg)
ಫೈಸಲ್ ಪಟೇಲ್
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಫೈಸಲ್ ಪಟೇಲ್, ನಾನು ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದೇನೆ. ನಾನು ಈಗ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುವಲ್ಲಿ ತೊಡಗಿಸಿಕೊಂಡಿದ್ದು, ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನನ್ನ ತಂದೆಯವರು ಹಿಂದುಳಿದವರ ಮತ್ತು ದೀನ ದಲಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾನು ಕೂಡ ತಂದೆಯ ಪರಂಪರೆಯನ್ನು ಮುಂದುವರಿಸುವುದಾಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.