ಎರ್ನಾಕುಲಂ(ಕೇರಳ):ಕೇರಳದ ಕೊಚ್ಚಿ ಬಳಿಯ ಅರಬ್ಬಿ ಸಮುದ್ರದಲ್ಲಿ ಚಿಕ್ಕದಾದ ದ್ವೀಪವೊಂದು ಕಾಣಿಸಿಕೊಂಡಿದ್ದು, ಕೊಚ್ಚಿ ಬಂದರು ಗೇಟ್ನಿಂದ ಪಶ್ಚಿಮಕ್ಕೆ 7 ಕಿಲೋ ಮೀಟರ್ ದೂರದಲ್ಲಿ ಸುಮಾರು 8 ಕಿಲೋ ಮೀಟರ್ ಉದ್ದ ಹಾಗೂ 3.5 ಕಿ.ಮೀ ಅಗಲವಿದೆ ಎಂದು ತಿಳಿದು ಬಂದಿದೆ.
ಕೇರಳದ ಕೊಚ್ಚಿಯ ಕರಾವಳಿಯಿಂದ ಸ್ವಲ್ಪ ದೂರದಲ್ಲಿನ ಅರೇಬಿಯನ್ ಸಮುದ್ರದಲ್ಲಿ ದಿಡೀರ್ ಆಗಿ ಈ ದ್ವೀಪ ಕಂಡು ಬಂದಿರುವುದು ಅನೇಕ ಆಶ್ಚರ್ಯಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸಮುದ್ರದಲ್ಲೇ ರಚನೆಯಾಗಿದೆ ಎಂದು ಹೇಳಲಾಗುತ್ತಿದ್ದು, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಅಧಿಕಾರಿಗಳು ಇದೀಗ ಹೆಚ್ಚಿನ ಸಂಶೋಧನೆ ಮಾಡಲು ಮುಂದಾಗಿದ್ದಾರೆ.