ಮುಂಬೈ:ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್ ನಷ್ಟಕ್ಕೆ 207 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕುವ ಮೂಲಕ ಮೊದಲ ಪಂದ್ಯದಲ್ಲೇ ಅಬ್ಬರಿಸಿದೆ. ಇಲ್ಲಿಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ಪರ ಕ್ರೀಸ್ಗಿಳಿದು ಮೊದಲು ಬ್ಯಾಟಿಂಗ್ ಮಾಡಿದ ಹೇಯ್ಲಿ ಮ್ಯಾಥ್ಯೂಸ್ ಬೌಂಡರಿಗಳೊಂದಿಗೆ ಉತ್ತಮ ಆರಂಭ ಒದಗಿಸಿದರು.
ಆದರೆ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಯಾಸ್ತಿಕಾ ಭಾಟಿಯಾ 8 ಎಸೆತಗಳಲ್ಲಿ ಕೇವಲ 1 ರನ್ ಕಲೆ ಹಾಕಿ ತನುಜಾ ಕನ್ವರ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ಮೂಲಕ 2.3 ಓವರಗೆ ತಂಡದ ಮೊತ್ತು 15/1 ಆಗಿತ್ತು. ಬಳಿಕ ಕ್ರೀಸ್ಗಿಳಿದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ನ್ಯಾಟ್-ಸಿವರ್ ಬ್ರಂಟ್, ಹೇಯ್ಲಿ ಮ್ಯಾಥ್ಯೂಸ್ 50 ರನ್ಗಳ ಜತೆಯಾಟವಾಡಿದರು.
ಬಳಿಕ 18 ಎಸೆತಗಳಲ್ಲಿ 5 ಬೌಂಡರಿ ಸಮೇತ 23 ರನ್‌ಗಳನ್ನು ಕಲೇ ಹಾಕಿದ್ದ ಬ್ರಂಟ್, ಜಾರ್ಜಿಯಾ ವೇರ್ಹ್ಯಾಮ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಮೂಲಕ ಹೇಯ್ಲಿ ಮ್ಯಾಥ್ಯೂಸ್ ಮತ್ತು ಬ್ರಂಟ್ ಆಟಕ್ಕೆ ಬ್ರೇಕ್ ಹಾಕಲಾಯಿತು. ಈ ವೇಳೆಗೆ ಮುಂಬೈ ತಂಡದ ಸ್ಕೋರ್ 69/2 ಆಗಿತ್ತು. ಮತ್ತೊಂದು ಬದಿ 31 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದ್ದ ಹೇಯ್ಲಿ ಮ್ಯಾಥ್ಯೂಸ್, ಆಶ್ಲೀಗ್ ಗಾರ್ಡ್ನಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.