ಕೋಯಿಕ್ಕೋಡ್ (ಕೇರಳ):ಶಿಕ್ಷಣ ವಂಚಿತ ಬುಡಕಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಶಿಕ್ಷಕಿಯೋರ್ವರು ಪ್ರತಿದಿನ 16 ಕಿಲೋ ಮೀಟರ್ ನಡೆದು ಹೋಗಿ ಬರುತ್ತಿದ್ದಾರೆ.
ಕೋಯಿಕ್ಕೋಡ್ದ ಅಂಬುಮಾಳದ ಬುಡಕಟ್ಟು ಕಾಲೋನಿಯಲ್ಲಿರುವ 20ಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಕಿ ಮಿನಿ ಪ್ರತಿದಿನ ಪಾಠ-ಪ್ರವಚನ ಮಾಡ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭಯದಲ್ಲೇ ನಡೆದು ಸಾಗುವ ಇವರು ಸಂಜೆ ಮನೆಗೆ ವಾಪಸ್ ಆಗುತ್ತಾರೆ.
ಕೋಝಿಕ್ಕೋಡ್ ಜಿಲ್ಲೆಯ ಚಾಲಿಯಾರ್ ಪಂಚಾಯತ್ನ ವೆಂಡತು ಪೊಯಿಲ್ ನಿವಾಸಿಯಾಗಿರುವ ಮಿನಿ, ಅಂಬುಮಾಲಾ ಸರ್ಕಾರಿ ಶಾಲೆಯಲ್ಲಿರುವ ಏಕೈಕ ಶಿಕ್ಷಕಿ. ಈ ಹಿಂದೆ ಅಲ್ಲಿ ಶಿಕ್ಷಕಿಯಾಗಿದ್ದವರು ರಾಜೀನಾಮೆ ನೀಡಿದಾಗ ಮಿನಿ ಅರೆ ಶಿಕ್ಷಕಿಯಾಗಿ ಶಾಲೆಗೆ ಸೇರಿಕೊಂಡರು.
2015ರಿಂದಲೂ ಪ್ರತಿದಿನ 16 ಕಿಲೋ ಮೀಟರ್ ನಡೆದೇ ಹೋಗುತ್ತಿದ್ದು, ಮಿನಿ ಬುಡಕಟ್ಟು ಸಮುದಾಯದ ನೆಚ್ಚಿನ ಮಿನಿ ಶಿಕ್ಷಕಿಯಾಗಿದ್ದರು. ಇದರ ಜೊತೆಗೆ ಆದಿವಾಸಿಗಳಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವ ಸ್ವಯಂಸೇವಕಿಯೂ ಆದರು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಅಲ್ಲಿನ ಸಮುದಾಯಕ್ಕೆ ಕೋವಿಡ್ ಲಸಿಕೆ ಹಾಕಿಸುವಲ್ಲಿಯೂ ಯಶಸ್ವಿಯಾದರು.
ಇದನ್ನೂ ಓದಿ:ಮಾರ್ಚ್ 18ರೊಳಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ 12 ರೂ ಏರಿಕೆ?
ಕಳೆದ ಐದು ತಿಂಗಳಿಂದ ಮಿನಿಗೆ ಸಂಬಳ ನೀಡಿಲ್ಲ. ಇಲ್ಲಿಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಕಾಡು-ಪ್ರಾಣಿಗಳ ಕಾಟದ ಮಧ್ಯೆ ನಡೆದುಕೊಂಡೇ ಹೋಗುತ್ತಾರೆ. ಸಮುದಾಯದಲ್ಲಿ ವಾಸವಾಗಿರುವ 6ರಿಂದ 10 ವರ್ಷದ ಮಕ್ಕಳಿಗೆ ಶಿಕ್ಷಣ ನೀಡ್ತಿದ್ದು, ಅಲ್ಲಿನ ಮಕ್ಕಳ ಬಾಳಲ್ಲಿ ಬೆಳಕು ತರುವ ಕೆಲಸ ಮಾಡ್ತಿದ್ದಾರೆ.
ಈ ಬುಡಕಟ್ಟು ಸಮುದಾಯದಲ್ಲಿ ಒಟ್ಟು 25 ಕುಟುಂಬಗಳಿದ್ದು, 26 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ 12ನೇ ತರಗತಿ ವ್ಯಾಸಂಗ ಮಾಡ್ತಿದ್ದು, ಮತ್ತೋರ್ವ 11ನೇ ತರಗತಿ ಕಲಿಯುತ್ತಿದ್ದಾನೆ. ಉಳಿದ ವಿದ್ಯಾರ್ಥಿಗಳಿಗೆ ಮಿನಿ ಶಿಕ್ಷಣ ನೀಡ್ತಿದ್ದಾರೆ.