ನವದೆಹಲಿ:ಜಗತ್ತಿನಲ್ಲಿ ಅತ್ಯಧಿಕ ಬಳಕೆದಾರರುಳ್ಳ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಕೇವಲ 20 ರೂಪಾಯಿಗಾಗಿ ಹುಡುಗಿಯರ ಅಶ್ಲೀಲ ವಿಡಿಯೋಗಳನ್ನು ಹರಿಬಿಡುತ್ತಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದೆಹಲಿ ಮಹಿಳಾ ಆಯೋಗ ಈ ಬಗ್ಗೆ ವರದಿ ನೀಡಲು ಕೋರಿ ದೆಹಲಿ ಪೊಲೀಸರು ಮತ್ತು ಟ್ವಿಟರ್ಗೆ ನೋಟಿಸ್ ನೀಡಿದೆ.
ಟ್ವಿಟರ್‌ನ ವಿವಿಧ ಖಾತೆಗಳಲ್ಲಿ ಕೇವಲ 20 ರೂಪಾಯಿಗೆ ಹುಡುಗಿಯರು ಮತ್ತು ಮಹಿಳೆಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರೇ ಟ್ವೀಟ್ ಮಾಡಿ ದೂರಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನೂರಾರು ಟ್ವಿಟರ್ ಖಾತೆಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಪೋರ್ನ್ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಶ್ಲೀಲ ವಿಡಿಯೋಗಳನ್ನು 20 ರೂಪಾಯಿಯಿಂದ ವಿವಿಧ ಬೆಲೆಗಳಿಗೆ ಮಾರಾಟ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.