ಹೈದರಾಬಾದ್:ಗಂಭೀರ ವಿಚಾರದ ಬಗ್ಗೆ ಗಂಡನೊಬ್ಬ ಜೂಮ್ ಕಾಲ್ನಲ್ಲಿ ಮೀಟಿಂಗ್ ನಡೆಸುತ್ತಿದ್ದ ವೇಳೆ ಪತ್ನಿ ಕಿಸ್ ಮಾಡಲು ಮುಂದಾಗಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜೂಮ್ ಕಾಲ್ನಲ್ಲಿ ಗಂಡ ಕಚೇರಿ ವಿಚಾರವಾಗಿ ಚರ್ಚೆ ನಡೆಸುತ್ತಿದ್ದಾಗ ಅಲ್ಲಿಗೆ ಆಗಮಿಸಿರುವ ಪತ್ನಿ ಆತನಿಗೆ ಕಿಸ್ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕ್ರೋಶದಿಂದ ಹೆಂಡ್ತಿ ಕಡೆ ನೋಡಿದ್ದು, ಆಕೆ ಕಿರುನಗೆ ಬೀರಿದ್ದಾಳೆ.
ಓದಿ: ಗ್ರಾಹಕರ ರಕ್ಷಣೆ ಬ್ಯಾಂಕ್ಗಳ ಜವಾಬ್ದಾರಿ.. ಲಾಕರ್ ಬಗ್ಗೆ 6 ತಿಂಗಳಲ್ಲಿ ನಿಯಮ ರೂಪಿಸುವಂತೆ ಆರ್ಬಿಐಗೆ ಸುಪ್ರೀಂ ಸೂಚನೆ
ಈ ವಿಡಿಯೋ ಶೇರ್ ಮಾಡಿರುವ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ, ನಾನು ಈ ಮಹಿಳೆಯನ್ನ ವೈಫ್ ಆಫ್ ದಿ ಇಯರ್ಗೆ ನಾಮಿನೇಟ್ ಮಾಡುತ್ತೇನೆ ಎಂದಿದ್ದಾರೆ. ಜತೆಗೆ ಗಂಡ ತುಂಬಾ ಆಸೆ ಹೊಂದಿದ್ದರೆ ಅವರನ್ನ ಕೂಡ ವರ್ಷದ ಜೋಡಿಗೆ ನಾಮನಿರ್ದೇಶನ ಮಾಡುತ್ತಿದ್ದೆ. ಆದರೆ ಅವರು ಅದನ್ನ ಕಳೆದುಕೊಂಡಿದ್ದಾರೆಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಎರಡು ಲಕ್ಷ ವೀಕ್ಷಣೆ ಆಗಿದ್ದು, ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ.