ಕರ್ನಾಟಕ

karnataka

ETV Bharat / bharat

ತಾಯಿ-ಮಗಳ ಥಳಿಸಿ, ಬೆತ್ತಲೆಗೊಳಿಸಿ ದುಷ್ಕೃತ್ಯ: ಅಮಾನವೀಯ ಘಟನೆಯ ವಿಡಿಯೋ ವೈರಲ್​ - ರಾಜಸ್ಥಾನದಲ್ಲಿ ತಾಯಿ-ಯುವತಿ ಮೇಲೆ ಹಲ್ಲೆ

ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಜತೆ ಸಂಧಾನ ಮಾಡಿಕೊಳ್ಳುವ ಉದ್ದೇಶದಿಂದ ಮನೆಗೆ ಕರೆಯಿಸಿಕೊಂಡಿದ್ದ ಯುವಕನ ಕಡೆಯವರು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

women stripped naked of mother and daughter
women stripped naked of mother and daughter

By

Published : Mar 9, 2021, 10:06 PM IST

ಟೊಂಕ್​(ರಾಜಸ್ಥಾನ): ಜಿಲ್ಲೆಯ ಪಚೆವಾರ್​ ಪೊಲೀಸ್ ಠಾಣಾ ಪ್ರದೇಶದ ಹಳ್ಳಿವೊಂದರಲ್ಲಿ ಕೆಲ ಮಹಿಳೆಯರು ಸೇರಿ ತಾಯಿ-ಮಗಳನ್ನು ಅಮಾನುಷವಾಗಿ ಥಳಿಸಿ, ಬೆತ್ತಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಡಿವೈಎಸ್ಪಿ ಚಕ್ರವರ್ತಿ ಸಿಂಗ್ ರಾಥೋಡ್​ ತಿಳಿಸಿದ್ದಾರೆ.

ತಾಯಿ-ಮಗಳನ್ನ ಥಳಿಸಿ, ಬೆತ್ತಲೆ ಮಾಡಿದ ಸ್ಥಳೀಯರು

ಏನಿದು ಪ್ರಕರಣ?:ಪಚೆವಾರ್​ ಪೊಲೀಸ್ ಠಾಣಾ ಪ್ರದೇಶದ ಹಳ್ಳಿವೊಂದರಲ್ಲಿ ವಾಸವಾಗಿದ್ದ ಯುವತಿಯೋರ್ವಳನ್ನ ಅದೇ ಗ್ರಾಮದ ಕೆಲ ಯುವಕರು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 15ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದಾದ ಬಳಿಕ ಯುವಕರ ಕುಟುಂಬಸ್ಥರು ಸಂಧಾನ ಮಾಡಿಕೊಳ್ಳುವ ಉದ್ದೇಶದಿಂದ ಸಂತ್ರಸ್ತ ಯುವತಿ ಹಾಗೂ ತಾಯಿಯನ್ನು ಮನೆಗೆ ಆಹ್ವಾನಿಸಿದ್ದರು. ಈ ವೇಳೆ ಯುವಕನ ಸಂಬಂಧಿಕರು ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದು, ಅವರ ಬಟ್ಟೆ ಹರಿದು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.

ಇದನ್ನೂ ಓದಿ: ನಂದಿಗ್ರಾಮ: ಟೀ ತಯಾರಿಸಿ ಸ್ಥಳೀಯರಿಗೆ ಹಂಚಿದ ಸಿಎಂ ಮಮತಾ

ಇದೀಗ ಮಾತನಾಡಿರುವ ಡಿವೈಎಸ್ಪಿ ರಾಥೋಡ್​ ಎರಡು ದಿನಗಳ ಹಿಂದೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಬಂಧನ ಮಾಡಲಾಗುವುದು ಎಂದಿದ್ದಾರೆ. ತಾಯಿ-ಮಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details