ಕರ್ನಾಟಕ

karnataka

By

Published : Feb 17, 2022, 9:21 PM IST

ETV Bharat / bharat

ಕೋವಿಡ್​​ ಭೀತಿ: ಮನೆಗಳಿಗೆ ಸೀಮಿತವಾದ ಅಟ್ಟುಕಲ್ ಪೊಂಗಲ್​ ಹಬ್ಬ

ಕೋವಿಡ್​​ ಭೀತಿ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿಷೇಧಗೊಂಡಿದ್ದ ಅಟ್ಟುಕಲ್ ಪೊಂಗಲ್​ ಹಬ್ಬವನ್ನು ತಿರುವನಂತಪುರಂನಲ್ಲಿ ಆಚರಣೆ ಮಾಡಲಾಗಿದೆ. ಆದರೆ, ಅಟ್ಟುಕಲ್ ಭಗವತಿ ದೇವಸ್ಥಾನಕ್ಕೆ ಭಕ್ತರಿಗೆ ಕೆಲವು ಸಂಖ್ಯೆಯ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಜನರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

Women Offer Attukal Pongala  At Home
ತಿರುವನಂತಪುರಂನಲ್ಲಿ ಮನೆಗಳಿಗೆ ಸೀಮಿತವಾದ ಅಟ್ಟುಕಲ್ ಪೊಂಗಲ್​ ಹಬ್ಬ

ತಿರುವನಂತಪುರಂ(ಕೇರಳ): ಅಟ್ಟುಕಲ್ ಎಂಬುದು ಕೇರಳದ ತಿರುವನಂತಪುರದ ಬಳಿಯಿರುವ ಒಂದು ಯಾತ್ರಾಸ್ಥಳ. ಇದು ಹೆಣ್ಣು ಮಕ್ಕಳ ಶಬರಿಮಲೆ ಎಂದೇ ಹೆಸರಾಗಿದೆ. ಇಲ್ಲಿ ಅಧಿಕ ಸಂಖ್ಯೆ ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಮಣ್ಣಿನ ಪಾತ್ರೆ ಇಟ್ಟು ಪೊಂಗಲ್ ಮಾಡುವ ಆಚರಣೆ ಇದೆ. ಆದರೆ, ಕೋವಿಡ್​ ಹಿನ್ನೆಲೆಯಲ್ಲಿ ಇಲ್ಲಿನ ಅಟ್ಟುಕಲ್ ಭಗವತಿ ದೇವಸ್ಥಾನದ ಪೀಠಾಧಿಪತಿಗಳು ಸರಳವಾಗಿ ಅಟ್ಟುಕಲ್ ಪೊಂಗಲ್​ ಹಬ್ಬ ಆಚರಣೆ ಮಾಡಲಾಯಿತು.

ತಿರುವನಂತಪುರಂನಲ್ಲಿ ಮನೆಗಳಿಗೆ ಸೀಮಿತವಾದ ಅಟ್ಟುಕಲ್ ಪೊಂಗಲ್​ ಹಬ್ಬ

ಕೋವಿಡ್​​ ಹಿನ್ನೆಲೆಯಲ್ಲಿ ಕಳೆದೆಡರು ವರ್ಷಗಳಿಂದ ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಪೊಂಗಲ ಹಬ್ಬವನ್ನು ನಿಷೇಧಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ಕೊಂಚ ಇಳಿಮುಖಗೊಂಡಿದ್ದು, ಸರಳ ಆಚರಣೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮೂಹಿಕವಾಗಿ ಸೇರದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರಿಂದ ಈ ವರ್ಷವೂ ಆಚರಣೆಗಳನ್ನು ಮನೆಗಳಿಗೆ ಸೀಮಿತಗೊಳಿಸಲಾಗಿತ್ತು. ಇದೇ ವೇಳೆ, ಕೆಲವರು ಮನೆಯಲ್ಲಿಯೇ ಪೊಂಗಲ್​ ಮಾಡಿ ದೇಗುಲಕ್ಕೆ ಅರ್ಪಿಸಿದರು.

ಈ ವರ್ಷ ದೇವಾಲಯದ ಮೈದಾನದಲ್ಲಿ ಗರಿಷ್ಠ 1,500 ಜನರಿಗೆ ಆಚರಣೆ ಮಾಡಲು ಸರ್ಕಾರ ಅವಕಾಶ ನೀಡಲಾಗಿತ್ತು. ಆದರೆ ಅಟ್ಟುಕಲ್ ದೇವಾಲಯದ ಟ್ರಸ್ಟ್ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿರಾಕರಿಸಿ ಮನೆಗಳಲ್ಲೆ ಆಚರಿಸುವಂತೆ ಸೂಚಿಸಿತ್ತು. ಇದರಿಂದ ಮಹಿಳಾ ಭಕ್ತರು ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ಇಟ್ಟಿದ್ದ ತಾತ್ಕಾಲಿಕ ಇಟ್ಟಿಗೆ ಒಲೆಗಳನ್ನು ಹಚ್ಚಿ ಪ್ರಾರ್ಥನೆಯೊಂದಿಗೆ ನೈವೇದ್ಯ ಸಿದ್ಧಪಡಿಸಿ ದೇವರಿಗೆ ಅರ್ಪಿಸಿದರು.

ಈ ಆಚರಣೆಯೂ 2009 ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿದೆ. ಒಂದೇ ದಿನದಲ್ಲಿ 2.5 ಮಿಲಿಯನ್ ಹೆಣ್ಣು ಮಕ್ಕಳು ಒಟ್ಟು ಸೇರಿ ಒಲೆ ಹಾಕಿ ಅದರ ಮೇಲೆ ಮಣ್ಣಿನ ಪಾತ್ರೆ ಇಟ್ಟು ಪೊಂಗಲ್ (ಅಕ್ಕಿ,ಸಕ್ಕರೆ,ತೆಂಗಿನ ತುರಿ,ಒಣದ್ರಾಕ್ಷಿ,ಹಾಲು ಹಾಕಿ ತಯಾರಿಸುವ ಪಾಯಸ) ತಯಾರಿಸಿದ್ದರು.

ಈ ಪೊಂಗಲ್ ಹಬ್ಬವು ಪ್ರತಿವರ್ಷ ಭರಣಿ ಸಲುವ ಕಾರ್ತಿಕ ನಕ್ಷತ್ರದ ಮಕರ ಮಾಸ ಅಥವಾ ಕುಂಭ ಮಾಸದಲ್ಲಿ ಬರುತ್ತದೆ. 10 ದಿವಸ ಜಾತ್ರೆ ನಡೆಯುತ್ತದೆ. ಈ ಉತ್ಸವದಲ್ಲಿ ವಿದೇಶಿಯರು ಸಹ ಅತ್ಯದಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಇದನ್ನೂ ಓದಿ: ವಾಟರ್ ಟ್ಯಾಕ್ಸಿ ಮೂಲಕ ಕೇವಲ 30 ನಿಮಿಷಗಳಲ್ಲಿ ಮುಂಬೈಗೆ!


For All Latest Updates

TAGGED:

ABOUT THE AUTHOR

...view details