ಕರ್ನಾಟಕ

karnataka

ETV Bharat / bharat

ವ್ಯವಸಾಯ ಉಪಕರಣಗಳ ಕೊರತೆ.. ನೊಗಕ್ಕೆ ಹೆಗಲುಕೊಟ್ಟ ಸ್ತ್ರೀಯರು..

ಶಾಮಾ ತಹಸಿಲ್ ಪ್ರದೇಶದಲ್ಲಿ ಹೇರಳವಾಗಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಬೆಳೆದ ಬೆಳೆಗಳಿಗೆ ದೇಶ-ವಿದೇಶದಲ್ಲಿ ಹೆಚ್ಚು ಬೇಡಿಕೆಯಿದೆ. ಆದರೆ, ಬಡತನ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಇಲ್ಲಿನ ಮಹಿಳೆಯರು ಹೊಲದಲ್ಲಿ ಕೆಲಸ ಮಾಡುವಂತಾಗಿದೆ..

Rithkula village
ನೊಗಕ್ಕೆ ಹೆಗಲುಕೊಟ್ಟ ಸ್ತ್ರೀಯರು

By

Published : Jun 8, 2021, 5:19 PM IST

ಬಾಗೇಶ್ವರ(ಉತ್ತರಾಖಂಡ): ಭಾರತ ಕೃಷಿ ಪ್ರಧಾನ ರಾಷ್ಟ್ರ. ಶೇಕಡಾ 51ರಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಆದರೆ, ರೈತರಿಗೆ ಬೆಳೆ ಬೆಳೆಯಲು ಬೇಕಾದ ಉಪಕರಣಗಳು, ಸೌಲಭ್ಯ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಉತ್ತರಾಖಂಡದ ಬಾಗೇಶ್ವರದ ಈ ಘಟನೆ.

ವ್ಯವಸಾಯ ಉಪಕರಣಗಳ ಕೊರತೆ.. ನೊಗಕ್ಕೆ ಹೆಗಲುಕೊಟ್ಟ ಸ್ತ್ರೀಯರು..

ಜಿಲ್ಲೆಯಲ್ಲಿ ಭೂಮಿ ಉಳುಮೆ ಮಾಡಲು ಎತ್ತುಗಳಿಲ್ಲದ ಕಾರಣ ಇಬ್ಬರು ಮಹಿಳೆಯರು ಕಲ್ಲಿನ ಭೂಮಿಯಲ್ಲಿ ನೊಗಕ್ಕೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ.

ಶಾಮಾ ತಹಸಿಲ್‌ನ ದೂರದ ಪ್ರದೇಶವಾದ ರಿತ್ಕುಲಾದಲ್ಲಿ ಸಣ್ಣ ಸಣ್ಣ ಹೊಲಗಳಲ್ಲಿ ಬೆಳೆ ಬೆಳೆಯುತ್ತಾರೆ. ಇಲ್ಲಿನ ಬಹುತೇಕ ರೈತಾಪಿ ವರ್ಗಗಳಿಗೆ ತೀವ್ರ ಬಡತನವಿರುವ ಕಾರಣ, ಜಾನುವಾರುಗಳನ್ನು ಖರೀದಿಸಲು ಸಾಧ್ಯವಿಲ್ಲ.

ಹಾಗಾಗಿಯೇ, ಏನೇ ಬೆಳೆ ಬೆಳೆಯಬೇಕೆಂದರೂ, ಇವರೇ ನೊಗಗಳಿಗೆ ಹೆಗಲು ಕೊಡ್ತಾರೆ. ಆಧುನಿಕತೆ ಎಷ್ಟೇ ಮುಂದುವರಿದರೂ ಇಲ್ಲಿನ ಮಹಿಳೆಯರಿಗೆ ಮಾತ್ರ ಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ:ಅಂಬಾಲಾದಲ್ಲಿ ಇವರ ಮನೆಯಲ್ಲಿಯೇ ಇದೆ ನೈಸರ್ಗಿಕ ಆಮ್ಲಜನಕ ಸ್ಥಾವರ

ಶಾಮಾ ತಹಸಿಲ್ ಪ್ರದೇಶದಲ್ಲಿ ಹೇರಳವಾಗಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಬೆಳೆದ ಬೆಳೆಗಳಿಗೆ ದೇಶ-ವಿದೇಶದಲ್ಲಿ ಹೆಚ್ಚು ಬೇಡಿಕೆಯಿದೆ. ಆದರೆ, ಬಡತನ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಇಲ್ಲಿನ ಮಹಿಳೆಯರು ಹೊಲದಲ್ಲಿ ಕೆಲಸ ಮಾಡುವಂತಾಗಿದೆ.

ಸರ್ಕಾರವು ಈವರೆಗೆ ಇವರ ಸಮಸ್ಯೆಗಳತ್ತ ಗಮನಹರಿಸಿಲ್ಲ. ಜನಪ್ರತಿನಿಧಿಗಳು ಕೂಡ ಅವರಿಗೆ ಸರ್ಕಾರದ ಯೋಜನೆಗಳ ಲಾಭ ಕೊಡಿಸಲು ಮುಂದಾಗಿಲ್ಲ.

ABOUT THE AUTHOR

...view details