ಬಾಗೇಶ್ವರ(ಹಿಮಾಚಲ ಪ್ರದೇಶ) :ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯದಂತೆ ಆಗ್ರಹಿಸಿ ನೂರಾರು ಮಹಿಳಾ ಪ್ರತಿಭಟನಾಕಾರರು ಮರಗಳನ್ನು ತಬ್ಬಿಕೊಂಡರು. ಡೆಹ್ರಾಡೂನ್‌ನ ಕಾಮೆದಿ ದೇವಿ-ರಂಗ್ಥರಾ-ಮಜ್‌ಗಾಂವ್-ಚೌನಾಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ.
ಉತ್ತರಾಖಂಡ್ನ ಬೆಟ್ಟಗಳಲ್ಲಿನ ಅರಣ್ಯವು ನ್ಯಾಯದೇವತೆ 'ಕೋಟ್ಗರಿ ದೇವಿ'ಗೆ ಸೇರಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ ಎಂದು ಬಾಗೇಶ್ವರದ ಜಖಾನಿ ಗ್ರಾಮದ ಮಹಿಳೆಯರು ಒಂದೇ ಧ್ವನಿಯಲ್ಲಿ ಹೇಳಿದ್ದಾರೆ.
ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸರ್ಪಂಚ್ ಕಮಲಾ ಮೆಹ್ತಾ ಅವರ ನೇತೃತ್ವದಲ್ಲಿ ಮಹಿಳೆಯರು ಸಭೆ ನಡೆಸಿದ್ದಾರೆ. ಸಭೆಯ ನಂತರ ಹಳ್ಳಿಯ ಪ್ರತಿಯೊಬ್ಬ ಮಹಿಳೆಯೂ ಮರವನ್ನು ಹಿಡಿದು ತಬ್ಬಿಕೊಂಡರು. ಮಹಿಳೆಯರು ತಮ್ಮ ಮಕ್ಕಳಂತೆ ಮರಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು.