ನಾಸಿಕ್(ಮಹಾರಾಷ್ಟ್ರ): ಚಿನ್ನ ಖರೀದಿ ಮಾಡಲು ಜುವೆಲ್ಲರಿ ಶಾಪ್ಗೆ ಬಂದಿದ್ದ ಮಹಿಳೆಯರ ಗುಂಪುವೊಂದು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದು ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಶಾಪ್ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಚಿನ್ನ ಖರೀದಿ ಮಾಡಲು ಮೂವರು ಮಹಿಳೆಯರು ಜುವೆಲ್ಲರಿ ಶಾಪ್ಗೆ ಬಂದಿದ್ದು, ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣದ ಪೆಟ್ಟಿಗೆ ಕದ್ದೊಯ್ದಿದ್ದಾರೆ. ನಿನ್ನೆ ಮಧ್ಯಾಹ್ನ ಸರಾಫ್ ಬಜಾರ್ನಲ್ಲಿ ಈ ಘಟನೆ ನಡೆದಿದೆ. ಪುಟ್ಟ ಬಾಲಕಿಯೊಂದಿಗೆ ಅಂಗಡಿಗೆ ಬಂದಿರುವ ಮೂವರು ಮಹಿಳೆಯರು ಚಿನ್ನಾಭರಣ ನೋಡುವ ನೆಪದಲ್ಲಿ ಬಾಕ್ಸ್ ಕದ್ದೊಯ್ದಿದ್ದಾರೆ. ಇದರ ಮೌಲ್ಯ 4.5 ಲಕ್ಷ ರೂ ಎಂದು ಹೇಳಲಾಗಿದೆ. ಘಟನೆ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿವೆ.