ಹರಿಯಾಣ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಇಂದು ಪಂಜಾಬ್ನ ಮಹಿಳೆಯರು ರೈತ ಪ್ರತಿಭಟನೆಗೆ ಸಾಥ್ ನೀಡಲು ಆಗಮಿಸಿದ್ದಾರೆ.
ದೆಹಲಿ - ಹರಿಯಾಣ ಗಡಿಭಾಗವಾದ ಟಿಕ್ರಿ ಗಡಿಗೆ ಮಹಿಳೆಯರು ದೌಡಾಯಿಸಿದ್ದು, ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ದೆಹಲಿ ಗಡಿಯಲ್ಲಿ ನೇಣಿಗೆ ಶರಣಾದ ರೈತ: 240ಕ್ಕೇರಿದ ಸಾವಿನ ಸಂಖ್ಯೆ
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಧರಣಿ ನೂರು ದಿನಗಳನ್ನು ದಾಟಿದೆ. ಪ್ರತಿಭಟನೆ ವೇಳೆ 240ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರ ಹಾಗೂ ರೈತ ಮುಖಂಡರ ನಡುವಿನ ಹಲವು ಸುತ್ತಿನ ಮಾತುಕತೆಗಳೂ ವಿಫಲವಾಗಿವೆ.