ಕರ್ನಾಟಕ

karnataka

ETV Bharat / bharat

CCTV Video : ಬೈಕ್​ನಿಂದ ಬಿದ್ದ ಮಹಿಳೆ ಮೇಲೆ ಹರಿದ ಬಸ್​​, ಸ್ಥಳದಲ್ಲೇ ದುರ್ಮರಣ - CCTV Video

ಈ ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. 45 ವರ್ಷದ ಮಹಿಳೆ ಪಳನಿಯಮ್ಮ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ..

Women crushed under bus wheel
Women crushed under bus wheel

By

Published : Jul 31, 2021, 9:18 PM IST

ದಿಂಡಿಗಲ್​​(ತಮಿಳನಾಡು) :ಕಟ್ಟಡ ನಿರ್ಮಾಣ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ 45 ವರ್ಷದ ಮಹಿಳೆ ಮೇಲೆ ಬಸ್​ ಹರಿದು ಹೋಗಿರುವ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬೈಕ್​ನಿಂದ ಬಿದ್ದ ಮಹಿಳೆ ಮೇಲೆ ಹರಿದ ಬಸ್​​, ಸ್ಥಳದಲ್ಲೇ ದುರ್ಮರಣ

ತಮಿಳುನಾಡಿನ ದಿಂಡಿಗಲ್​ನಲ್ಲಿ ಈ ದುರ್ಘಟನೆ ನಡೆದಿದ್ದು, ಕಟ್ಟಡ ನಿರ್ಮಾಣ ಕೆಲಸ ಮುಗಿಸಿ, ಸ್ನೇಹಿತರೊಂದಿಗೆ ಬೈಕ್​​ ಮೇಲೆ ಮನೆಗೆ ತೆರಳುತ್ತಿದ್ದಳು. ಬೈಕ್​ ಚಲಾಯಿಸುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿರುವ ಕಾರಣ ಮೂವರು ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ದಿಢೀರ್​ ಆಗಿ ಬಂದಿರುವ ಸರ್ಕಾರಿ ಬಸ್​ ಮಹಿಳೆ ಮೇಲೆ ಹರಿದು ಹೋಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪಳನಿಯಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿರಿ: ಚಕ್ ದೇ! ಇಂಡಿಯಾ; ಸೆಮಿಫೈನಲ್​ ಸ್ಥಾನಕ್ಕಾಗಿ ಗ್ರೇಟ್​ ಬ್ರಿಟನ್​ ವಿರುದ್ಧ ನಾಳೆ ಭಾರತದ ಫೈಟ್​​​

ಈ ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. 45 ವರ್ಷದ ಮಹಿಳೆ ಪಳನಿಯಮ್ಮ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ABOUT THE AUTHOR

...view details