ವಿಶಾಖಪಟ್ಟಣಂ(ಆಂದ್ರ ಪ್ರದೇಶ): ಬೀಚ್ನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ಭಾವಿಸಲಾಗಿದ್ದ ವಿವಾಹಿತ ಮಹಿಳೆಯೊಬ್ಬರು ಎರಡು ದಿನಗಳ ನಂತರ ಯುವಕನೊಬ್ಬನ ಜೊತೆ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಹಿಳೆ ಪತ್ತೆಯಾದ ವಿಷಯ ತಿಳಿದು ಸಮುದ್ರದಲ್ಲಿ ನಡೆಸುತ್ತಿದ್ದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.
ವಿಶಾಖಪಟ್ಟಣಂ ವಿಶಾಖಪಟ್ಟಣಂನ ಆರ್.ಕೆ.ಬೀಚ್‌ಗೆ ಸೋಮವಾರ ಸಾಯಿಪ್ರಿಯಾ ಎಂಬ ಮಹಿಳೆ ತನ್ನ ಪತಿ ಶ್ರೀನಿವಾಸ ರಾವ್ ಜೊತೆಗೆ ಬಂದಿದ್ದರು. ಎರಡನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಸಾಯಿಪ್ರಿಯಾ ದಂಪತಿ ಸಿಂಹಾಚಲಂಗೆ ತೆರಳಿದ್ದರು. ಅಲ್ಲಿಂದ ಆರ್.ಕೆ.ಬೀಚ್‌ಗೆ ತೆರಳಿದ್ದರು. ಆದರೆ, ಸಾಯಿಪ್ರಿಯಾ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪತಿ ಶ್ರೀನಿವಾಸ ರಾವ್ ಪೊಲೀಸರಿಗೆ ದೂರು ನೀಡಿದ್ದರು.
ಅಂತೆಯೇ, ಪೊಲೀಸರು, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಸ್ ಸಿಬ್ಬಂದಿ ಎರಡು ದಿನಗಳ ಕಾಲ ಸ್ಪೀಡ್ ಬೋಟ್ಗಳು ಹಾಗೂ ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಎರಡು ದಿನಗಳ ಕಳೆದರೂ ಸಾಯಿ ಪ್ರಿಯಾ ಪತ್ತೆಯಾಗದ ಕಾರಣ ನಾಪತ್ತೆಯಾಗಿದ್ದಾರೆ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ, ಇದೀಗ ವಿಚಿತ್ರ ಎಂಬಂತೆ ಸಾಯಿಪ್ರಿಯಾ ನೆಲ್ಲೂರಿನಲ್ಲಿ ಬೇರೆ ಯುವಕನೊಂದಿಗೆ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.