ಚಿತ್ತೋರ್‌ಗಢ (ರಾಜಸ್ಥಾನ): ಹಾವುಗಳೆಂದರೆ ಮಾರುದ್ದ ಓಡಿ ಹೋಗುವ ಜನರು ಮೊದಲು ತಮ್ಮ ಜೀವ ಉಳಿಸಿಕೊಳ್ಳಲು ನೋಡುತ್ತಾರೆ. ಅಲ್ಲದೆ ವಿಷಕಾರಿ ಹಾವುಗಳು ಕಚ್ಚಿದಾಗ ಆಸ್ಪತ್ರೆಗೆ ತೆರಳಲು ಸಹ ಸಮಯ ಇಲ್ಲದೆ ತಕ್ಷಣವೇ ಸಾವು ಬಂದೊದಗುತ್ತದೆ. ಆದರೆ ಚಿತ್ತೋರ್ಗಢದ ಈ ಮಹಿಳೆಗೆ 34 ಬಾರಿ ಹಾವು ಕಡಿದರೂ ಇಂದಿಗೂ ಆರೋಗ್ಯವಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಳ್ಳಿಯ ಶಾಖೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 45 ವರ್ಷದ ಬ್ರಜಬಾಲಾ ತಿವಾರಿಗೆ ಹಾವುಗಳು ಹಿಂದೆಬಿದ್ದು ಕಚ್ಚುತ್ತಿದ್ದವಂತೆ. ಅದು ಒಂದೆರಡು ಬಾರಿ ಅಲ್ಲ ಬರೋಬ್ಬರಿ 34 ಬಾರಿ ಕಚ್ಚಿಸಿಕೊಂಡಿದ್ದಾರೆ. ಒಮ್ಮೆ ಹಾವು ಕಚ್ಚಿದಾಗ ಆಕಯೆ ಪತಿ ಕೃಷ್ಣ ದತ್ ತಿವಾರಿ ಸೇರಿದಂತೆ ಕುಟುಂಬ ಸದಸ್ಯರು ಭಯಭೀತರಾಗಿದ್ದು ತಕ್ಷಣ ಅವರನ್ನು ಚಿತ್ತೋರ್‌ಗಢ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಕೆಲ ದಿನಗಳಲ್ಲೇ ಬ್ರಜಬಾಲಾ ಚೇತರಿಸಿಕೊಂಡಿದ್ದರು.