ಲಖನೌ (ಉತ್ತರ ಪ್ರದೇಶ): ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ದುರ್ಬಳಕೆ ಮಾಡಿಕೊಂಡ ವಿವಾಹಿತ ಮಹಿಳೆಯೊಬ್ಬಳ ದಾಂಪತ್ಯ ಜೀವನಕ್ಕೆ ಹುಳಿ ಬಿದ್ದಿದೆ. ಪತಿಗೆ ತಿಳಿಯದೇ ಅನ್ಯರೊಂದಿಗೆ ಆಕೆ ಆನ್‌ಲೈನ್ ಅಶ್ಲೀಲ ಚಾಟಿಂಗ್ ಮಾಡಿದ್ದಾಳೆ. ಇದರಿಂದ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡಿದ್ದಾಳೆ. ಆದರೆ, ಇದೇ ಸಂಪಾದನೆ ಮೇಲೆ ಪತಿಯ ಕಣ್ಣು ಬಿದ್ದಿದ್ದು, ನೀಚ ಕೃತ್ಯವನ್ನೇ ಮುಂದುವರೆಸುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಆ ಮಹಿಳೆ ಈಗ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ!.
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಇಂತಹ ವಿಲಕ್ಷಣ ಪ್ರಕರಣ ವರದಿಯಾಗಿದೆ. ವಿಚ್ಛೇದನದ ಅರ್ಜಿ ಸ್ವೀಕರಿಸಿರುವ ಕೌಟುಂಬಿಕ ನ್ಯಾಯಾಲಯದ ವಕೀಲರು ಸಹ ಈ ಕಥೆ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ 36 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ಬಂದಿದೆ ಎಂದು ಹಿರಿಯ ವಕೀಲ ಸಿದ್ಧಾಂತ್ ಕುಮಾರ್ ಹೇಳಿದರು.
ಪ್ರಕರಣದ ಸಂಪೂರ್ಣ ಮಾಹಿತಿ:ವಿವಾಹಿತ ಮಹಿಳೆ ಹುಡುಗರೊಂದಿಗೆ ಆನ್‌ಲೈನ್ ಸೆಕ್ಸ್ ಚಾಟ್ ಮಾಡುತ್ತಿದ್ದಳು. ಅದಕ್ಕೆ ಪ್ರತಿಯಾಗಿ ಈಕೆಗೆ ಸೋಶಿಯಲ್ ಮೀಡಿಯಾದ ಅಪ್ಲಿಕೇಶನ್ಗಳಿಂದ ಪ್ರತಿ ತಿಂಗಳಿಗೆ 80 ಸಾವಿರದಿಂದ 10 ಲಕ್ಷ ರೂ.ವರೆಗೆ ಹಣ ಸಿಗುತ್ತಿತ್ತು. ಆದರೆ, ಮಹಿಳೆಯು ಹಣದ ಮೂಲದ ಬಗ್ಗೆ ತನ್ನ ಗಂಡನಿಗೆ ಹೇಳಿಯೇ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಹೇಗೆ ಕೆಲಸ ಮಾಡುತ್ತಾಳೆ ಎಂಬುದೂ ಸಹ ಆಕೆಯ ಪತಿಗೆ ಗೊತ್ತಿರಲಿಲ್ಲ. ಮಹಿಳೆಯೂ ತನ್ನ ಪತಿಯನ್ನು ಪ್ರತಿ ದಾರಿ ತಪ್ಪಿಸುತ್ತಿದ್ದಳು.
ಆದರೆ, ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿಡಿಯೋಗಳು ಟ್ರೆಂಡ್ ಆಗಿವೆ ಎಂದು ಮಾತ್ರ ಈ ಮಹಿಳೆ ಪತಿಗೆ ಹೇಳುತ್ತಿದ್ದಳು. ಈ ವಿಡಿಯೋಗಳಿಗೆ ಬರುವ ಲೈಕ್ಸ್ ಮತ್ತು ವ್ಯೂವ್ಸ್ ಆಧಾರದ ಮೇಲೆ ಆ್ಯಪ್ನವರು ನನಗೆ ಹಣವನ್ನು ಪಾವತಿಸುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಳು. ಆದರೆ, ವಾಸ್ತವದಲ್ಲಿ ಈ ಮಹಿಳೆ ಆನ್ಲೈನ್ನಲ್ಲಿ ಅಶ್ಲೀಲ ವಿಡಿಯೋ ಆ್ಯಪ್ಗಳ ಮೂಲಕ ಪರ ಪುರುಷರೊಂದಿಗೆ ಚಾಟ್ ಮಾಡುತ್ತಿದ್ದಳು. ಗ್ರಾಹಕರು ಮಾತುಕತೆಯಲ್ಲಿ ತೊಡಗಿದ್ದಷ್ಟೂ ಈಕೆಗೆ ಹೆಚ್ಚು ಹಣ ಸಿಗುತ್ತಿತ್ತು.
ನಗ್ನ ವಿಡಿಯೋ ಶೇರ್ ಮಾಡಿ ಸಂಕಷ್ಟ: ಇದರ ನಡುವೆ ಈ ಮಹಿಳೆಯು ಓರ್ವ ಯುವ ಗ್ರಾಹಕನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದಳು. ಅಲ್ಲದೇ, ಇಬ್ಬರ ನಡುವೆ ಪ್ರೀತಿಯೂ ಹುಟ್ಟುಕೊಂಡಿತ್ತು. ಇಷ್ಟು ದಿನಗಳ ಕಾಲ ಅಶ್ಲೀಲ ಆ್ಯಪ್ನಲ್ಲಿ ಮಾತಿನ ಮೂಲಕವೇ ಪುರುಷರನ್ನು ಆಕೆ ಸೆಳೆಯುತ್ತಿದ್ದಳು. ಯಾವತ್ತೂ ಕೂಡ ತನ್ನ ನಗ್ನ ಫೋಟೋಗಳು ಅಥವಾ ವಿಡಿಯೊಗಳನ್ನು ಆ್ಯಪ್ನಲ್ಲಿ ಪೋಸ್ಟ್ ಮಾಡಿರಲಿಲ್ಲ.