ಫತೇಹಾಬಾದ್ (ಹರಿಯಾಣ): ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ನಂತರ ಅವರನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಇಲ್ಲಿನ ತೋಹಾನದ ತೂರ್ ನಗರದ ನಿವಾಸಿ ಮನ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಾಗ ಮಹಿಳೆಯೊಂದಿಗೆ ಅವರ 9 ವರ್ಷದ ಮಗ ಕೂಡ ಜೊತೆಗಿದ್ದ ಎಂದು ಹೇಳಲಾಗಿದೆ.
ರೋಹ್ಟಕ್‌ನ ಖರೇಂತಿ ಗ್ರಾಮದಿಂದ ಮನ್‌ದೀಪ್ ಕೌರ್ ತನ್ನ ಮಗನೊಂದಿಗೆ ಗಂಡನ ಮನೆಯಾದ ತೋಹಾನಾಗೆ ರೈಲಿನಲ್ಲಿ ಬರುತ್ತಿದ್ದರು. ಇತ್ತ, ತೋಹಾನಾ ರೈಲು ನಿಲ್ದಾಣದಲ್ಲಿ ಪತಿ ತನ್ನ ಹೆಂಡತಿಯ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ, ರೈಲು ಬಂದರೂ ಪತ್ನಿ ಕಾಣಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಆದರೆ, ರಾತ್ರಿ ಮನ್‌ದೀಪ್ ಕೌರ್ ಪತ್ತೆಯಾಗಿರಲಿಲ್ಲ.