ಅಜ್ಮೀರ್(ರಾಜಸ್ಥಾನ): ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ಮುಂದುವರೆದಿದ್ದು, ರಾಮಬಾಣವಾಗಿರುವ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲರಿಗೂ ಮನವಿ ಮಾಡಿಕೊಳ್ತಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ವ್ಯಾಕ್ಸಿನೇಷನ್ ಬಗ್ಗೆ ಇರುವ ಭಯ ಮಾತ್ರ ಇಲ್ಲಿಯವರೆಗೆ ಕಡಿಮೆಯಾಗಿಲ್ಲ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.
ರಾಜಸ್ಥಾನದ ಅಜ್ಮೀರ್ದಲ್ಲಿರುವ ನಗೆಲಾವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಲ್ಬೇಲಿಯಾ ಶಿಬಿರದಲ್ಲಿ ವಾಸವಾಗಿದ್ದ ಕೆಲವರಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಉದ್ದೇಶದಿಂದ ಆರೋಗ್ಯ ಸಿಬ್ಬಂದಿಗಳು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ, ಮಹಿಳೆಯೊಬ್ಬಳು ತನ್ನ ಕೈಯಲ್ಲಿ ಹಾವು ಹಿಡಿದುಕೊಂಡು, ಆರೋಗ್ಯ ಸಿಬ್ಬಂದಿಗೆ ಹೆದರಿಸಿದ್ದಾಳೆ. ನನಗೆ ಒಂದು ವೇಳೆ ಲಸಿಕೆ ಹಾಕಿಸಿದರೆ ಹಾವಿನಿಂದ ಕಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ವೈದ್ಯರ ತಂಡ ಕೆಲ ನಿಮಿಷಗಳ ಕಾಲ ಗಾಬರಿಗೊಂಡಿದೆ.