ಕರ್ನಾಟಕ

karnataka

ETV Bharat / bharat

ಶಾಪಿಂಗ್​ ವೇಳೆ ಮಹಿಳೆಯರಿಂದ ಯುವತಿಗೆ ಹಿಗ್ಗಾಮುಗ್ಗಾ ಥಳಿತ: 'ಆಂಟಿ' ಅನ್ನುವ ಮುನ್ನ ಹುಷಾರ್​​! - ಎಟಾ ಸುದ್ದಿ,

ಮಹಿಳೆವೋರ್ವಳಿಗೆ ಆಂಟಿ ಎಂದು ಕರೆದು ಯುವತಿವೋರ್ವಳು ಪೇಚಿಗೆ ಸಿಲುಕಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯರ ತಂಡವೊಂದು ಯುವತಿಗೆ ಹಿಗ್ಗಾಮುಗ್ಗಾ ಥಳಿಸಿರುರುವ ವಿಡಿಯೋ ವೈರಲ್​ ಆಗಿದೆ.

Woman thrashes girl  Woman thrashes girl for being called aunty  woman thrashes teenage girl in etah  ಯುವತಿಗೆ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆಯರು  ಎಟಾದಲ್ಲಿ ಯುವತಿಗೆ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆಯರು  ಯುವತಿಗೆ ಥಳಿತ ಸುದ್ದಿ  ಎಟಾ ಸುದ್ದಿ,  ಶಾಪಿಂಗ್​ ವೇಳೆ ಮಹಿಳೆಯರಿಂದ ಬ್ಯೂಟಿಗೆ ಬಿದ್ವು ಗೂಸಾ
ವೈರಲ್​ ವಿಡಿಯೋ

By

Published : Nov 4, 2020, 1:36 PM IST

ಎಟಾ (ಉತ್ತರ ಪ್ರದೇಶ):ಇಲ್ಲಿನ ಬಾಬುಗಂಜ್​ ಮಾರುಕಟ್ಟೆಯಲ್ಲಿ ಮಹಿಳೆಯರ ಹೈಡ್ರಾಮ ನಡೆಯಿತು. ಇಲ್ಲೋರ್ವ ಯುವತಿಯು ಮಹಿಳೆಗೆ ಆಂಟಿ ಎಂದು ಕರೆದಿದ್ದಕ್ಕೆ ಆಕೆ ಗೂಸಾ ತಿಂದಿದ್ದಾಳೆ.

ವೈರಲ್​ ವಿಡಿಯೋ

‘ಕರ್ವಾ ಚೌತ್’ ಶಾಪಿಂಗ್​ಗಾಗಿ ಬಾಬುಗಂಜ್ ಮಾರುಕಟ್ಟೆಗೆ ​​ಮಹಿಳೆಯರ ದಂಡೇ ಹರಿದುಬರುತ್ತಿದೆ. ಕಾಲಿಡಲು ಆಗದಷ್ಟು ಜನಜಂಗುಳಿಯಿಂದ ಮಾರುಕಟ್ಟೆ ಕೂಡಿದೆ. ಈ ವೇಳೆ ಅಂಗಡಿವೊಂದರಲ್ಲಿ ಮಹಿಳೆಗೆ 19 ವರ್ಷದ ಯುವತಿಯೊಬ್ಬಳು ‘ಎಕ್ಸ್​ಕ್ಯೂಸ್​ಮಿ ಆಂಟಿ’ ಎಂದು ಕರೆದಿದ್ದಾಳೆ. ಇದರಿಂದ ಕುಪಿತಗೊಂಡ ಮಹಿಳೆ ಯುವತಿಯೊಂದಿಗೆ ಜಗಳಕ್ಕಿಳಿದು ಥಳಿಸಿದ್ದಾರೆ.

ಇವರ ಜಗಳ ನೋಡು-ನೋಡುತ್ತಿದ್ದಂತೆ ತಾರಕಕ್ಕೇರಿದೆ. ಪೊಲೀಸರು ಮಧ್ಯೆ ಪ್ರವೇಶಿಸಿದ್ರೂ ಸಹ ಜಗಳ ಮಾತ್ರ ತಣ್ಣಗಾಗಲಿಲ್ಲ. ಮಹಿಳೆಯರ ಗುಂಪು ಯುವತಿ ಮೇಲೆ ಹಲ್ಲೆ ಮಾಡಿದೆ. ಬಳಿಕ ಮಹಿಳಾ ಕಾನ್ಸ್​ಟೇಬಲ್​ ಇಬ್ಬರನ್ನು ಪೊಲೀಸ್​ ಠಾಣೆಗೆ ಕರೆದೊಯ್ದರು.

ಆಂಟಿ ಎಂದಿದ್ದಕ್ಕೆ ಮಹಿಳೆಯು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಕುಟುಂಬಸ್ಥರನ್ನು ಕರೆಸಿ ಎಚ್ಚರಿಕೆ ನೀಡಿದ್ದೇವೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಹಿಳಾ ಪೊಲೀಸ್​ ಠಾಣೆ ಅಧಿಕಾರಿ ಕಾಂಚನಾ ಕಟಿಯಾರ್​ ಹೇಳಿದ್ದಾರೆ.

ಮಹಿಳೆಯರ ಹೊಡೆದಾಟದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ABOUT THE AUTHOR

...view details