ಕರ್ನಾಟಕ

karnataka

ETV Bharat / bharat

ಶಿಕ್ಷಕಿಗೆ ಪೋರ್ನ್​ ಗೀಳು.. ಟ್ಯೂಷನ್ ಹುಡುಗರಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ಲು - sexual harassment on students

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಶಿಕ್ಷಕಿ ಮತ್ತು ಅವರ ಸ್ನೇಹಿತನನ್ನು ಬಂಧಿಸಲಾಗಿದೆ.

woman teacher arrested who sexually abused school boys in Tamil Nadu
ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣ

By

Published : Apr 5, 2022, 4:35 PM IST

Updated : Apr 5, 2022, 5:40 PM IST

ಮಧುರೈ (ತಮಿಳುನಾಡು):ಮಧುರೈನ ಬೆಥಾನಿಯಾಪುರಂ ಪ್ರದೇಶದ ಶಿಕ್ಷಕಿಯೋರ್ವರನ್ನು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಮಧುರೈ-ಶಿವಗಂಗೈ ಜಿಲ್ಲೆಯ ಗಡಿ ಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಶಿಕ್ಷಕಿಯಾಗಿರುವ ಇವರು ವಿದ್ಯಾರ್ಥಿಗಳಿಗೆ ಟ್ಯೂಷನ್​ ಕೂಡ ಹೇಳುತ್ತಿದ್ದರು.

ಶಿಕ್ಷಕಿ 16 ಮತ್ತು 18 ವರ್ಷದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಮೋಜು ಮಸ್ತಿ ಮಾಡಿರುವ ವಿಡಿಯೋ ಬಿಡುಗಡೆಯಾಗಿದ್ದು, ಸದ್ಯ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಶಿಕ್ಷಕಿಯ ಗೆಳೆಯ ಎನ್ನಲಾದ ವೀರಮಣಿ (39) ಎಂಬಾತನನ್ನು ಸಹ ಪೋಕ್ಸೋ ಕಾಯ್ದೆಯಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಶಿಕ್ಷಕಿಯ ಗೆಳೆಯ ವೀರಮಣಿಯ ಹುಟ್ಟೂರು ಮಧುರೈನ ಥಾನಕ್ಕಂಕುಳಂ. ಕಳೆದ ಕೆಲವು ವರ್ಷಗಳಿಂದ ಪರಿಚಯಸ್ಥರಾಗಿದ್ದ ಇವರ ನಡುವೆ ಇತ್ತೀಚೆಗೆ ಆತ್ಮೀಯತೆ ಹೆಚ್ಚಿತ್ತು. ವೀರಮಣಿ ಆಗಾಗ್ಗೆ ಶಿಕ್ಷಕಿಯ ಮನೆಗೆ ಭೇಟಿ ನೀಡುತ್ತಿದ್ದ. ಇವರಿಬ್ಬರ ಅಕ್ರಮ ಸಂಬಂಧ ಶಿಕ್ಷಕಿಯ ಪತಿಗೆ ತಿಳಿದ ನಂತರ ಪತಿ ವಿಚ್ಛೇದನ ಪಡೆದಿದ್ದರು. ಅಂದಿನಿಂದ ಇವರಿಬ್ಬರ ಆತ್ಮೀಯತೆ ಇನ್ನೂ ಹೆಚ್ಚಿತ್ತು ಎನ್ನಲಾಗ್ತಿದೆ.

ಶಿಕ್ಷಕಿ ಮತ್ತು ಗೆಳೆಯ ವೀರಮಣಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಪೋರ್ನ್ ದೃಶ್ಯದಂತೆಯೇ ನಡೆದುಕೊಳ್ಳಬೇಕು ಎಂದು ಶಿಕ್ಷಕಿ, ಓದಲು ಬರುವ ಇಬ್ಬರು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಪ್ಲಾನ್​ ಮಾಡಿದ್ದರು. ಅದರಂತೆ ಆ ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಅವರನ್ನು ತಮ್ಮ ಬಲೆಗೆ ಬೀಳಿಸುವ ಪ್ರಯತ್ನ ಮಾಡಿದ್ದರು ಎಂಬ ಆರೋಪವಿದೆ.

ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ. ವೀರಮಣಿ ವಿದ್ಯಾರ್ಥಿಗಳ ಜೊತೆ ತೆಗೆಸಿಕೊಂಡಿರುವ ವಿಡಿಯೋವನ್ನು ಸೋದರ ಸಂಬಂಧಿ ಸೇರಿದಂತೆ ಕೆಲವರಿಗೆ ಕಳುಹಿಸಿದ್ದಾರೆ. ಅವರಲ್ಲಿ ಒಬ್ಬರು ವಿಡಿಯೋ ಬಗ್ಗೆ ಸಂಬಂಧಪಟ್ಟ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ್ದಾರೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಕರಿಮೇಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ವಿಡಿಯೋ ಕುರಿತು ತನಿಖೆ ಕೈಗೊಂಡಿದ್ದಾರೆ. ಸದ್ಯ ಅವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲು ಕ್ರಮ ಕೈಗೊಂಡಿದ್ದಾರೆ. ಮಧುರೈ ನಗರದ ಎಲ್ಲಾ ಮಹಿಳಾ ಪೊಲೀಸರು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ:ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ

ಪೊಲೀಸರು ಶಿಕ್ಷಕಿ ಮತ್ತು ಅವರ ಸ್ನೇಹಿತ ಬಳಸಿದ್ದ ಮೊಬೈಲ್‌ಗಳು, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇವು 50ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಒಳಗೊಂಡಿವೆ. ಟ್ಯೂಷನ್ ನಲ್ಲಿ ಓದುತ್ತಿದ್ದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಗೌಪ್ಯವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಬೇರೆ ಯಾರಿಗಾದರೂ ಇದರಿಂದ ತೊಂದರೆಯಾಗಿದೆಯೇ? ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.

Last Updated : Apr 5, 2022, 5:40 PM IST

ABOUT THE AUTHOR

...view details