ಕರ್ನಾಟಕ

karnataka

ETV Bharat / bharat

ಮಗುವಿಗೆ ಮೊಲೆಯುಣಿಸುತ್ತಿರುವಾಗ ಹೃದಯಾಘಾತ: ತಾಯಿ ಸಾವು

ತನ್ನ ಮಗುವಿಗೆ ಬೆಳಗಿನ ಜಾವ ಹಾಲು ಕುಡಿಸುತ್ತಿರುವಾಗಲೇ ತಾಯಿ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೊಲೆಯೂಡಿಸುತ್ತಿರುವಾಗಲೇ ತಾಯಿಗೆ ಹೃದಯಾಘಾತ ಸಂಭವಿಸಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

Jayashree died of a heart attack while breastfeeding the baby
ಮಗುವಿಗೆ ಮೊಲೆಯೂಡಿಸುತ್ತಿರುವಾಗ ಹೃದಯಾಘಾತವಾಗಿ ಮೃತಪಟ್ಟ ಜಯಶ್ರೀ

By

Published : Jul 25, 2022, 3:10 PM IST

Updated : Jul 25, 2022, 4:01 PM IST

ನಾಗರಕರ್ನೂಲ್ (ತೆಲಂಗಾಣ): ತನ್ನ ಮಗುವಿಗೆ ಮೊಲೆ ಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.

ಘಟನೆಯ ವಿವರ: ರಾಜಾಪುರ ಮಂಡಲದ ತಿರುಮಲಾಪುರ ಗ್ರಾಮದ ಜಯಶ್ರೀ (25) ಎಂಬುವರು ತಮ್ಮ ಮೊದಲ ಮಗುವಿನ ಹೆರಿಗೆಗಾಗಿ ಎರಡು ತಿಂಗಳ ಹಿಂದೆ ನೆರೆಲ್ಲಪಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಹೆಣ್ಣು ಮಗುವಾಗಿತ್ತು.

ಇತ್ತೀಚೆಗೆ ಒಂಚೂರು ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಪತಿ ಪ್ರಶಾಂತ್, ಜಯಶ್ರೀ ಅವರನ್ನು ಚಿಕಿತ್ಸೆಗಾಗಿ ಮಹಬೂಬ್​ ನಗರದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡ ಹೋಗಿದ್ದರು. ಅವರ ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಔಷಧದಿಂದ ಗುಣವಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಅವರನ್ನು ಮರಳಿ ನೆರೆಲ್ಲಪಲ್ಲಿಗೆ ಕರೆದುಕೊಂಡು ಬರಲಾಗಿತ್ತು.

ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಜಯಶ್ರೀ ಮಗುವಿಗೆ ಹಾಲು ಕುಡಿಸುತ್ತಲೇ ಹೃದಯಾಘಾತ ಕಾಣಿಸಿಕೊಂಡು ನಿಧನರಾಗಿದ್ದಾರೆ. ಅಜ್ಜ, ಅಜ್ಜಿ ಆಕೆಯನ್ನು ಟೀ ಕುಡಿಯಲು ಕೂಗಿದರೂ ಎದ್ದು ಬರದಿದ್ದಾಗ, ಹೋಗಿ ನೋಡಿದರೆ ಅವರಿಗೆ ಆಘಾತ ಕಾದಿತ್ತು. ಹಾಲು ಕುಡಿಸುತ್ತಲೇ ಜಯಶ್ರೀ ನಿಧನರಾಗಿದ್ದರು.

ಇದನ್ನು ಓದಿ:ಅಂಧತ್ವ ಮೆಟ್ಟಿ ನಿಂತ ಬಾಲೆ.. CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ

Last Updated : Jul 25, 2022, 4:01 PM IST

ABOUT THE AUTHOR

...view details