ಕರ್ನಾಟಕ

karnataka

ETV Bharat / bharat

ನಡುರಸ್ತೆಯಲ್ಲೇ ಮಹಿಳೆಗೆ ಚಾಕು ಇರಿದ ವ್ಯಕ್ತಿ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರತೆ

ನಡುರಸ್ತೆಯಲ್ಲಿಯೇ ಮಹಿಳೆ ಮೇಲೆ ಚಾಕು ಹಿಡಿದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಾಳಿ ಮಾಡಿದ್ದ ಆರೋಪಿ ಪರಾರಿಯಾಗಿದ್ದಾನೆ.

woman-stabbed-multiple-times-in-delhi-cctv-footage-emerges
ನಡುರಸ್ತೆಯಲ್ಲೇ ಮಹಿಳೆಗೆ ಚಾಕು ಇರಿದ ವ್ಯಕ್ತಿ

By

Published : Jun 4, 2021, 3:42 PM IST

ರೋಹಿಣಿ (ನವದೆಹಲಿ): ವ್ಯಕ್ತಿಯೊಬ್ಬ ನೆರೆಹೊರೆಯ ಮಹಿಳೆಗೆ ಚಾಕುವಿನಿಂದ ಮನಬಂದಂತೆ ಇರಿದಿರುವ ಘಟನೆ ರೋಹಿಣಿ ಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಮೇಲೆ ದಾಳಿ ಮಾಡಿರುವ ಭೀಕರ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಾಕು ಹಿಡಿದು ದಾಳಿ ಮಾಡಿರುವಾತನನ್ನು ನರೇಶ್ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಚಾಕು ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವವಾಗಿದ್ದ ಮಹಿಳೆಯನ್ನ ಸಫ್ದರ್​ಜುಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ನಡುರಸ್ತೆಯಲ್ಲೇ ಮಹಿಳೆಗೆ ಚಾಕು ಇರಿದ ವ್ಯಕ್ತಿ

ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಆದರೆ ಮನೆಯೊಳಗಿದ್ದ ಮಹಿಳೆಯನ್ನ ಹೊರಗೆ ಕರೆದು ಚಾಕು ಇರಿಯಲಾಗಿದೆ ಎಂಬುದು ತಿಳಿದುಬಂದಿದೆ.

ABOUT THE AUTHOR

...view details