ಕರ್ನಾಟಕ

karnataka

ETV Bharat / bharat

ವಿಮಾನದಲ್ಲಿ ನೇತಾಡುತ್ತಾ ವರ್ಕ್ ಔಟ್ ಮಾಡಿದ ಮಹಿಳಾ ಸ್ಕೈಡೈವರ್: ವಿಡಿಯೋ ನೋಡಿ - skydiver workout viral video

ವಿಮಾನದ ಒಂದು ಬದಿಯಲ್ಲಿ ನೇತಾಡುತ್ತಾ ಮಹಿಳಾ ಸ್ಕೈ ಡೈವರ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಯುವತಿಯ ಧೈರ್ಯಕ್ಕೆ ಬೆರಗಾದ ನೆಟಿಜನ್ಸ್‌ ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

woman skydiver
ವರ್ಕ್ ಔಟ್ ಮಾಡಿದ ಮಹಿಳಾ ಸ್ಕೈಡೈವರ್

By

Published : Aug 21, 2022, 10:40 AM IST

ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಶೌರ್ಯ ಪ್ರದರ್ಶಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಹೌದು, ವಿಮಾನದ ಅಂಚಿನಲ್ಲಿ ನೇತಾಡುತ್ತಾ ಮಹಿಳಾ ಸ್ಕೈಡೈವರ್‌ವೊಬ್ಬರು ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಆಗಸ್ಟ್ 1ರಂದು ಕೇಟೀ ವಸೆನಿನಾ ಎಂಬ ಸ್ಕೈಡೈವರ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ.

ವಾಸೆನಿನಾ ಭಯವಿಲ್ಲದೇ ವಿಮಾನದ ಬದಿಯಿಂದ ನೇತಾಡುತ್ತಾ ಎರಡು ಕಾಲುಗಳನ್ನು ಮೇಲೆತ್ತುವ ಮೂಲಕ ಕಿಬ್ಬೊಟ್ಟೆಗೆ ಸಂಬಂಧಿಸಿದ ವ್ಯಾಯಾಮ ಮಾಡಿದ್ದಾರೆ. ಬಳಿಕ ಚಂಗನೆ ಆಕಾಶದಿಂದ ಭೂಮಿಗೆ ನೆಗೆದಿದ್ದಾರೆ. ಈಕೆಯ ಶೌರ್ಯ ನೋಡಿ ರೋಮಾಂಚನಗೊಂಡ ಜನರು​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೇಟೀ ವಸೆನಿನಾ ಪ್ರೊಫೈಲ್ ಪ್ರಕಾರ, ಈಕೆ ಯುಸಿಎಫ್ ಸ್ಕೂಲ್ ಆಫ್ ಕಿನಿಸಿಯಾಲಜಿಯಲ್ಲಿ ಪಿಹೆಚ್‌ಡಿ ವಿದ್ಯಾರ್ಥಿನಿ. ಜೊತೆಗೆ ಇವರು ಇನ್​​ಸ್ಟಾಗ್ರಾಮ್​ನಲ್ಲಿ ಸಕ್ರಿಯವಾಗಿದ್ದು​ 1.3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಇದನ್ನೂ ಓದಿ:ಸ್ಕೂಟರ್‌ನಲ್ಲಿ ಮುಂಬೈ ಸಿಟಿ ಸುತ್ತಿದ ವಿರುಷ್ಕಾ, ವಿಡಿಯೋ ನೋಡಿ

ABOUT THE AUTHOR

...view details