ಪಟಿಯಾಲ (ಪಂಜಾಬ್):ಗುರುದ್ವಾರ ದುಃಖ ನಿವಾರಣ್ ಸಾಹಿಬ್‌ನ ಸಂಕೀರ್ಣದಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಪರ್ಮಿಂದರ್ ಕೌರ್ ಎಂದು ಗುರುತಿಸಲಾಗಿದೆ ಎಂದು ಗುರುದ್ವಾರ ಸಾಹಿಬ್‌ನ ಪ್ರಣಾಮ್ ಸಿಂಗ್ ತಿಳಿಸಿದ್ದಾರೆ.
ಮಹಿಳೆಯ ಜೇಬಿನಲ್ಲಿ ತಂಬಾಕು ಪ್ಯಾಕ್ ಮತ್ತು ಮದ್ಯದ ಬಾಟಲಿ ಪತ್ತೆಯಾಗಿದೆ. ಘಟನೆಯಲ್ಲಿ ಸೇವಕನೋರ್ವ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ನಿರ್ಮಲಜಿತ್ ಸಿಂಗ್ ಸೈನಿ ಎಂಬುವರನ್ನು ಬಂಧಿಸಲಾಗಿದೆ. ನನ್ನ ಮಗ ಸೇವೆ ಮಾಡಲು ಬಂದಿದ್ದಾನೆ. ಅವನಿಗೆ ಏನಾಯಿತು ಎಂಬುದು ನನಗೆ ಏನೂ ತಿಳಿದಿಲ್ಲ. ನಾನು ಈಗತಾನೆ ಆಸ್ಪತ್ರೆಗೆ ಬಂದಿದ್ದೇನೆ ಎಂದು ಗಾಯಗೊಂಡಿರುವ ಸೇವಕನ ತಾಯಿ ಹೇಳಿದರು.
ಮೃತ ಮಹಿಳೆಗೆ ಇತ್ತು ಕುಡಿತದ ಚಟ: ಈ ವೇಳೆ ಮೃತ ಮಹಿಳೆ ಪರ್ವಿಂದರ್ ಕೌರ್(32) ಅವರು ಟ್ಯಾಂಕ್ ಬಳಿ ಕುಳಿತು ಮದ್ಯ ಸೇವಿಸುತ್ತಿದ್ದರು ಎಂದು ಪಟಿಯಾಲ ಎಸ್ಎಸ್ಪಿ ವರುಣ್ ಶರ್ಮಾ ಖಚಿತಪಡಿಸಿದ್ದಾರೆ. ಮೃತ ಮಹಿಳೆಯ ವಿಳಾಸ ಪಿಜಿ ಆಗಿದ್ದು, ಅವಳು ಅಲ್ಲಿ 2 ರಿಂದ 3 ವರ್ಷಗಳಿಂದ ವಾಸವಿರಲಿಲ್ಲ. ಮಹಿಳೆಯ ಬಗ್ಗೆ ವಿಚಾರಿಸಲು, ಮೃತರ ಕುಟುಂಬ ಸದಸ್ಯರು ಮುಂದೆ ಬರಲಿಲ್ಲ. ತನಿಖೆಯ ಸಮಯದಲ್ಲಿ ಆದರ್ಶ ನಶಾ ಚುಡಾವೋ ಕೇಂದ್ರ, ಫ್ಯಾಕ್ಟರಿ ಏರಿಯಾ ಪಟಿಯಾಲದ ಚೀಟಿಯನ್ನು ಮೃತ ಮಹಿಳೆಯಿಂದ ವಶಪಡಿಸಿಕೊಳ್ಳಲಾಗಿದೆ. ಅಲ್ಲಿಂದ ತನಿಖೆ ನಡೆಸಿದಾಗ ಮಹಿಳೆ ಮದ್ಯಪಾನ ಮಾಡುವ ಚಟ ಹೊಂದಿದ್ದಳು ಎಂದು ತಿಳಿದಿದೆ. ಆಕೆ ಖಿನ್ನತೆಗೆ ಒಳಗಾಗಿದ್ದಳು, ಮನಸ್ಥಿತಿ ಕೂಡ ತುಂಬಾ ಬದಲಾಗುತ್ತು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದರು. ಈ ಮಹಿಳೆ ನಿನ್ನೆ ಜಿರಾಕ್‌ಪುರದಿಂದ ಬಸ್‌ನಲ್ಲಿ ಕುಳಿತು ಪಟಿಯಾಲಕ್ಕೆ ಬಂದಿದ್ದಳು. ಹತ್ಯೆಗೆ ಬಳಸಿದ ರಿವಾಲ್ವರ್ ಪರವಾನಗಿ ಬಗ್ಗೆ ಮಾಹಿತಿ ಪಡೆದಲಾಗಿದೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ರಿವಾಲ್ವರ್ವನ್ನು ವಶಪಡಿಸಿಕೊಳ್ಳಲಾಗಿದೆ.
ಶೂಟರ್ ನಿರ್ಮಲಜಿತ್ ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿ. ಅವರು ಬೆಳಗ್ಗೆ ಮತ್ತು ಸಂಜೆ ಗುರುದ್ವಾರಕ್ಕೆ ಬರುತ್ತಿದ್ದರು. ಗುರುದ್ವಾರದ ಜಲಾಶಯದ ಬಳಿ ಮಹಿಳೆ ಮದ್ಯಪಾನ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾರೆ. ನಾವು ಇಲ್ಲಿಯವರೆಗೆ ಪರೀಕ್ಷಿಸಿದ ವಿಷಯದಿಂದ, ಸಿಸಿಟಿವಿ ನೋಡಿದ ನಂತರ, ನಿನ್ನೆ (ಭಾನುವಾರ) ಈ ಮಹಿಳೆ ಜಿರಾಕ್‌ಪುರದಿಂದ ಬಸ್‌ನಲ್ಲಿ ಏಕಾಂಗಿಯಾಗಿ ಪಟಿಯಾಲ ತಲುಪಿರುವುದು ಕಂಡುಬಂದಿದೆ.