ಕರ್ನಾಟಕ

karnataka

ETV Bharat / bharat

ಮನೆಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು: ತಾಯಿ ಸಾವು, ಮಗಳ ಸ್ಥಿತಿ ಗಂಭೀರ - ತಾಯಿ ಮಗಳ ಮೇಲೆ ಗುಂಡಿ ದಾಳಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಮೂವರು ಮಕ್ಕಳೊಂದಿಗೆ ನೆಲೆಸಿದ್ದ ಮಹಿಳೆಯ​ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಅವರ ಮಗಳ ಸ್ಥಿತಿ ಚಿಂತಾಜನಕವಾಗಿದೆ.

woman-shot-dead-at-mansarovar-park-in-new-delhi
ಮನೆಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು

By

Published : Dec 1, 2020, 6:45 AM IST

ನವದೆಹಲಿ:ಮನೆಯೊಳಗಿದ್ದ ತಾಯಿ-ಮಗಳ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ ಘಟನೆ ಈಶಾನ್ಯ ದೆಹಲಿಯಲ್ಲಿ ತಡರಾತ್ರಿ ನಡೆದಿದೆ. ಘಟನೆಯಲ್ಲಿ ತಾಯಿ ಸ್ಥಳದಲ್ಲೇ ಮೃತಪಟ್ಟರೇ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

ಘಟನೆ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ಶಮಾ ಖಾನ್ ಸ್ಥಳದಲ್ಲೀ ಮೃತಪಟ್ಟಿದ್ದಾರೆ. ಅವರ ಮಗಳು ಮೆಹಕ್​​ಳನ್ನು ಸ್ವಾಮಿ ದಯಾನಂದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅಲ್ಲಿಂದ ಆಕೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಸಫ್ದರ್​ಜಂಗ್​ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿನ ಮನ್​​​ಸರೋವರ್ ಪಾರ್ಕ್​​​​​​​ ಅಪಾರ್ಟ್​​ಮೆಂಟ್​​​​ನ 4ನೇ ಮಹಡಿಯಲ್ಲಿ ಶಮಾ ಖಾನ್ ತನ್ನ ಮೂವರು ಮಕ್ಕಳೊಂದಿಗೆ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಮಾ ತನ್ನ ಪತಿಯಿಂದ ದೂರಾಗಿ, ಮಕ್ಕಳೊಂದಿಗೆ ನೆಲೆಸಿದ್ದರು. ಸೋಮವಾರ ರಾತ್ರಿ 7:30ಕ್ಕೆ ಮನೆಗೆ ಇಂಟರ್​​​ನೆಟ್​ ಸಂಪರ್ಕ ನೀಡಲು ವ್ಯಕ್ತಿವೋರ್ವ ಬಂದಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಬೈಕ್​​​ನಲ್ಲಿ ಬಂದು ಏಕಾಏಕಿ ಗುಂಡು ಹಾರಿಸಿದ್ದಾರೆ. ಮೊದಲು ಮೆಹಕ್ ಮೇಲೆ ದಾಳಿಗೆ ಯತ್ನಿಸಿದಾಗ ಆಕೆಯ ತಾಯಿ ಶಮಾ ಖಾನ್ ಅಡ್ಡಬಂದಿದ್ದಾರೆ. ಈ ವೇಳೆ ತಾಯಿ ಶಮಾ ಖಾನ್​​ಗೆ ಗುಂಡೇಟು ತಗುಲಿ ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details