ಕೊರ್ಬಾ(ಛತ್ತೀಸ್‌ಗಢ): 'ರಾಂಗ್ ನಂಬರ್' ವಿಚಾರವಾಗಿ ಗಂಡನ ಜೊತೆ ಜಗಳವಾಡಿದ ಪತ್ನಿ ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊರ್ಬಾದ ಮಾಣಿಕ್‌ಪುರ್ ಚೌಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಏನಿದು ಪ್ರಕರಣ?:ಮಾಣಿಕ್‌ಪುರ್ ಚೌಕಿ ಪ್ರದೇಶದ ಸೂರಜ್ ಮಹಂತ್ ಹಾಗೂ ಪೂಜಾ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಸೋಮವಾರ ಪತಿ ಸೂರಜ್ ಮಹಂತ್ ಅವರ ಮೊಬೈಲ್ಗೆ ಹುಡುಗಿಯೊಬ್ಬಳು ಕರೆ ಮಾಡಿದ್ದಾಳೆ. ಈ ವಿಚಾರವಾಗಿ ದಂಪತಿ ನಡುವೆ ತೀವ್ರ ಜಗಳವಾಗಿದೆ. ಪತ್ನಿ ಪೂಜಾ ತನ್ನ ಪತಿ ಆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದಾರೆ. ಬಳಿಕ ವಾದ ವಿಕೋಪಕ್ಕೆ ತಿರುಗಿ ಪೂಜಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.