ಕರ್ನಾಟಕ

karnataka

ETV Bharat / bharat

ಸುಳ್ಳು ಅತ್ಯಾಚಾರ ಪ್ರಕರಣ ​: ಮಧ್ಯಪ್ರದೇಶದಲ್ಲಿ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ

ಮಹಿಳೆ ತನ್ನ ಆರೋಪವನ್ನು ಹಿಂಪಡೆದುಕೊಂಡಿದ್ದು, ಜಮೀನು ವಿವಾದದಿಂದ ಸಂಚು ರೂಪಿಸಿ ನಾಲ್ವರ ಮೇಲೆ ಸುಳ್ಳು ಕೇಸ್​ ದಾಖಲು ಮಾಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದರು..

Woman sentenced for 10 years in Madhya Pradesh over false rape allegations
ಮಧ್ಯಪ್ರದೇಶದಲ್ಲಿ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

By

Published : Dec 22, 2021, 7:58 PM IST

ರಾಜ್‌ಗಢ(ಮಧ್ಯಪ್ರದೇಶ):ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ 38 ವರ್ಷದ ಮಹಿಳೆಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

2008ರಲ್ಲಿ ಅಂದರೆ ಸುಮಾರು 13 ವರ್ಷಗಳ ಹಿಂದೆ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಜೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ನ್ಯಾಯಾಲಯ ವಿಚಾರಣೆಗೆ ಮುಂದಾಗಿತ್ತು. ಈ ವೇಳೆ ಮಹಿಳೆ ತನ್ನ ಆರೋಪವನ್ನು ಹಿಂಪಡೆದುಕೊಂಡಿದ್ದು, ಜಮೀನು ವಿವಾದದಿಂದ ಸಂಚು ರೂಪಿಸಿ ನಾಲ್ವರ ಮೇಲೆ ಸುಳ್ಳು ಕೇಸ್​ ದಾಖಲು ಮಾಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಘವೇಂದ್ರ ಶ್ರೀವಾಸ್ತವ ಎಲ್ಲಾ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿಂದು 321 ಮಂದಿಗೆ ಕೋವಿಡ್ ದೃಢ, ನಾಲ್ವರು ಸೋಂಕಿತರ ಸಾವು

ABOUT THE AUTHOR

...view details