ಕರ್ನಾಟಕ

karnataka

ETV Bharat / bharat

ಕಡುಬಡತನ ಹಿನ್ನೆಲೆ 21 ದಿನದ ಮಗು ಮಾರಾಟ ಮಾಡಿದ ತಾಯಿ.. ಆರು ಮಂದಿ ಬಂಧನ - ಮಾನವ ಕಳ್ಳ ಸಾಗಣೆಯ ಶಂಕೆ

ಕಡುಬಡತನ ಹಿನ್ನೆಲೆ ಹಸುಗೂಸನ್ನು ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿ ಆರು ಮಂದಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

woman-sells-her-21-day-old-girlchild-human-trafficking-racket-suspected
ಕಡುಬಡತನ ಹಿನ್ನಲೆ 21 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಿದ ತಾಯಿ : ಆರು ಮಂದಿ ಬಂಧನ

By

Published : Aug 1, 2023, 8:58 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕಡುಬಡತನದ ಹಿನ್ನೆಲೆ ಮಹಿಳೆಯೊಬ್ಬರು ತನ್ನ 21 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಘಟನೆ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಈ ಸಂಬಂಧ ಮಗುವಿನ ತಾಯಿ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೂಪಾಲಿ ಮಂಡಲ್, ರೂಪಾ ದಾಸ್, ಸ್ವಪ್ನಾ ಸರ್ದಾರ್, ಪೂರ್ಣಿಮಾ ಕುಂದು, ಕಲ್ಯಾಣಿ ಗುಹಾ ಮತ್ತು ಲಲಿತಾ ಡೇ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ಮಾನವ ಕಳ್ಳ ಸಾಗಣೆಯ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಗುವನ್ನು ಮಾರಾಟ ಮಾಡಿರುವ ಮಹಿಳೆ ಇಲ್ಲಿನ ನೊನದಂಗ ರೈಲ್ವೇ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಕಡು ಬಡತನದಿಂದ ರೋಸಿ ಹೋಗಿದ್ದ ಈಕೆ ತನ್ನ ಮಗುವನ್ನು ಕಲ್ಯಾಣಿ ಗುಹಾ ಎಂಬವರಿಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಸದ್ಯ ಮಗುವನ್ನು ವಶಕ್ಕೆ ಪಡೆದಿರುವ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೋಲ್ಕತ್ತಾ ಜಿಲ್ಲಾಧಿಕಾರಿ, ಹೆಣ್ಣುಮಗುವನ್ನು ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ತಾಯಿಯನ್ನು ಬಂಧಿಸಲಾಗಿದೆ. ಕೋಲ್ಕತ್ತಾ ಪೊಲೀಸರು ಇಂದು ಅಲಿಪೋರ್​ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು, ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್​ ಠಾಣೆಯಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆಯ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಒಟ್ಟು ಐದು ಮಂದಿ ಮಹಿಳೆಯರನ್ನು ಬಂಧಿಸಲಾಗಿದ್ದು, ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತದೆ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಎಲ್ಲೆಲ್ಲ ಇಂತಹ ಪ್ರಕರಣಗಳು ನಡೆದಿವೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಐವರು ಆರೋಪಿಗಳನ್ನು ಬೇರೆ ಬೇರೆ ಸ್ಥಳಗಳಿಂದ ಬಂಧಿಸಲಾಗಿದೆ. ಕೋಲ್ಕತ್ತಾದ ಬ್ಲಾಕ್-ಸಿ 6ನಿಂದ ಮಗುವಿನ ತಾಯಿಯನ್ನು ಬಂಧಿಸಲಾಗಿದೆ. ಈಕೆ ನೊನದಂಗ ರೈಲ್ವೇ ಕಾಲೋನಿಯಲ್ಲಿ ಬಾಡಿಗೆಯಲ್ಲಿ ವಾಸಿಸುತ್ತಿದ್ದಳು. ಬಳಿಕ ಪಟುಲಿಯಿಂದ ರೂಪಾ ದಾಸ್, ಬಾಘಾ ಜತಿನ್​ನಿಂದ ಸ್ವಪ್ನಾ ಸರ್ದಾರ್, ಲೋಹಾಪೂಲ್​ನಿಂದ ಪೂರ್ಣಿಮಾ ಕುಂದು, ಬಾಬಾ ಚರಣ್ ರಾಯ್ ರಸ್ತೆಯಿಂದ ಲಲಿತಾ ಡೇ, ಪರ್ಣಶ್ರೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಯಾಣಿ ಗುಹಾ ಎಂಬವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಮಗುವಿನ ಮಾರಾಟದಲ್ಲಿ ಮಧ್ಯವರ್ತಿಗಳಾಗಿ ವರ್ತಿಸಿರುವುದು ತನಿಖೆ ವೇಳೆ ತಿಳಿದುಬಂದಿದೆ.

ಮಗುವನ್ನು ಖರೀದಿಸಿರುವ ಕಲ್ಯಾಣಿ ಗುಹ ಕೋಲ್ಕತ್ತಾದ ಸೋನದಂಗಾ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಪೂರ್ವ ಮಿಡ್ನಾಪುರ ಜಿಲ್ಲೆಯ ನಿವಾಸಿಯಾಗಿದ್ದಾರೆ. ಕೋಲ್ಕತ್ತಾ ಗುಪ್ತಚರ ಇಲಾಖೆಯು ಮಿಡ್ನಾಪುರದ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ :'ಅಫ್ತಾಬ್​ ಅಮೀನ್​ ತನ್ನ ಕೈಯಿಂದಲೇ ಶ್ರದ್ಧಾಳ ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದ': ದೆಹಲಿ ಕೋರ್ಟ್​ನಲ್ಲಿ ಸಂತ್ರಸ್ತೆ ತಂದೆ ಹೇಳಿಕೆ

ABOUT THE AUTHOR

...view details