ಕರ್ನಾಟಕ

karnataka

ETV Bharat / bharat

ವಂದೇ ಭಾರತ್ ರೈಲಿಗೆ ಸಿಲುಕಿ ಮಹಿಳೆ ದುರ್ಮರಣ - ಗುಜರಾತ್‌ನ ಆನಂದ್ ಜಿಲ್ಲೆ

ಗುಜರಾತ್‌ನ ಆನಂದ್ ಜಿಲ್ಲೆಯ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ವಂದೇ ಭಾರತ್ ರೈಲಿಗೆ ಮಹಿಳೆ ಸಿಲುಕಿ ಮೃತಪಟ್ಟಿದ್ದಾರೆ.

woman-run-over-by-vande-bharat-train-in-gujarat
ಗುಜರಾತ್​ನಲ್ಲಿ ವಂದೇ ಭಾರತ್ ರೈಲಿಗೆ ಸಿಲುಕಿ ಮಹಿಳೆ ದುರ್ಮರಣ

By

Published : Nov 8, 2022, 7:23 PM IST

Updated : Nov 8, 2022, 10:20 PM IST

ಆನಂದ್ (ಗುಜರಾತ್): ಸೆಮಿ ಹೈಸ್ಪೀಡ್​ನ ವಂದೇ ಭಾರತ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯ ರೈಲು ನಿಲ್ದಾಣದ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ.

ಗಾಂಧಿ ನಗರದ ನಿಲ್ದಾಣದಿಂದ ಮುಂಬೈಗೆ ವಂದೇ ಭಾರತ್ ರೈಲು ತೆರಳುತ್ತಿತ್ತು. ಈ ವೇಳೆ ಸಂಜೆ 4.37ರ ಸುಮಾರಿಗೆ ಹಳಿ ದಾಟುತ್ತಿದ್ದಾಗ ಮಹಿಳೆ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅಹಮದಾಬಾದ್‌ನ ನಿವಾಸಿಯಾದ ಆರ್ಚಿಬಾಲ್ಡ್ ಪೀಟರ್, ಆನಂದ್‌ ಜಿಲ್ಲೆಯಲ್ಲಿರುವ ಸಂಬಂಧಿಕರ ಭೇಟಿಗೆಂದು ಬಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಂದೇ ಭಾರತ್ ರೈಲಿಗೆ ಸಿಲುಕಿ ಮಹಿಳೆ ದುರ್ಮರಣ

ಸೆಪ್ಟೆಂಬರ್ 30ರಂದು ಗಾಂಧಿ ನಗರ ಮತ್ತು ಮುಂಬೈ ನಡುವಿನ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದ್ದರು. ಕಳೆದ ಒಂದು ತಿಂಗಳಲ್ಲಿ ಇದೇ ರೈಲಿಗೆ ಮೂರು ಬಾರಿ ಜಾನುವಾರುಗಳು ಸಿಲುಕಿ ಸಾವನ್ನಪ್ಪಿದ ಘಟನೆಗಳು ನಡೆದಿದ್ದವು. ಇಂದು ಮಹಿಳೆ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಆರೋಪ

Last Updated : Nov 8, 2022, 10:20 PM IST

ABOUT THE AUTHOR

...view details