ಜಮ್ತಾರ(ಜಾರ್ಖಂಡ್): ಪತ್ನಿಯೇ ತನ್ನ ಗಂಡನ ರಾಸಲೀಲೆಯನ್ನು ಬಹಿರಂಗಪಡಿಸಿದ್ದಾರೆ. ವಿಧೆವೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಗಂಡನನ್ನು ಪತ್ನಿ ಊರಿನ ಜನರ ಮುಂದೆ ಬಹಿರಂಗಪಡಿಸಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಕುಂಧಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ 30 ವರ್ಷದ ವಿವಾಹಿತನಿಗೆ ಮತ್ತೊಂದು ಗ್ರಾಮದ 29 ವರ್ಷ ವಯಸ್ಸಿನ ವಿಧವೆಯ ಮೇಲೆ ಪ್ರೇಮಾಂಕುರವಾಗಿದೆ. ಇಬ್ಬರ ನಡುವಿನ ಪ್ರೀತಿ ಬಹಳ ದಿನಗಳಿಂದ ಮುಂದುವರಿದಿತ್ತು. ಮಂಗಳವಾರ ಬೆಳಗ್ಗೆ ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋಗಿದ್ದಾನೆ. ಆಗ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು. ಈ ವೇಳೆ ಆತನ ಹೆಂಡತಿ ನೇರವಾಗಿ ಅಲ್ಲಿ ತೆರಳಿ ಅವರಿಬ್ಬರಿದ್ದ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ನಗ್ನ ಸ್ಥಿತಿಯಲ್ಲಿ ಇರುವುದನ್ನು ಪತ್ನಿ ನೋಡಿದ್ದಾರೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದಾಗ ಪತಿ ಹಲ್ಲೆ ಮಾಡಿದ್ದಾನೆ. ಇದರಿಂದ ಪತ್ನಿಗೆ ಗಾಯವಾಗಿತ್ತು.