ಪ್ರತಾಪ್ಗಢ (ಯುಪಿ):ಲೂಡೋ ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕೊನೆಗೆ ತನ್ನನ್ನು ತಾನೇ ಪಣಕ್ಕಿಟ್ಟು ಸುದ್ದಿಯಾಗಿದ್ದಾಳೆ. ಉತ್ತರ ಪ್ರದೇಶದ ಪ್ರತಾಪ್ಗಢದಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಹಿಳೆಯ ಪತಿ, ನಾನು ಆರು ತಿಂಗಳ ಕಾಲ ರಾಜಸ್ಥಾನದ ಕ್ವಾರಿಯಲ್ಲಿ ಕೆಲಸ ಮಾಡಲು ತೆರಳಿದ್ದೆ. ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಕಾಲಕಾಲಕ್ಕೆ ಬ್ಯಾಂಕ್ ಖಾತೆಯ ಮೂಲಕ ಹಣ ಕಳುಹಿಸುತ್ತಿದ್ದೆ. ನನ್ನ ಪತ್ನಿಗೆ ಜೂಜಾಟವೆಂದರೆ ಇಷ್ಟ. ನಾನು ಕಳುಹಿಸಿದ ಹಣದಿಂದ ಆಕೆ ಜೂಜಾಡುತ್ತಿದ್ದಳು. ಅವಳಿಗೆ ಹಣವಿಲ್ಲದಿದ್ದಾಗ ತನ್ನನ್ನು ತಾನೇ ಪಣಕ್ಕಿಟ್ಟು ಸೋತಿದ್ದಾಳೆ. ಅಲ್ಲದೇ ಜಮೀನುದಾರನೊಂದಿಗೆ ವಾಸಿಸಲು ನಿರ್ಧರಿಸಿದ್ದಾಳೆ ಎಂದು ಅಳಲು ತೋಡಿಕೊಂದಿದ್ದಾರೆ.