ಕರ್ನಾಟಕ

karnataka

ETV Bharat / bharat

ಮಹಿಳೆಯ ಬ್ಯಾಗ್​ ಕಸಿದು ರೈಲಿನಿಂದ ಹೊರಗೆ ತಳ್ಳಿದ ವ್ಯಕ್ತಿಯ ಬಂಧನ! - ಮಹಾರಾಷ್ಟ್ರ ಕ್ರೈಂ ನ್ಯೂಸ್​

Mumbai Crime News: ಮುಂಬೈ ರೈಲ್ವೆ ನಿಲ್ದಾಣದಲ್ಲಿ ನಡೆದ ಅಹಿತಕರ ಘಟನೆಯೊಂದರಲ್ಲಿ ಮನೋಜ್ ಚೌಧರಿ (32) ಎಂಬ ವ್ಯಕ್ತಿಯನ್ನು ಕೊಲೆ ಯತ್ನ ಮತ್ತು ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

By

Published : Aug 8, 2023, 9:45 AM IST

Updated : Aug 8, 2023, 9:52 AM IST

ಮುಂಬೈ(ಮಹಾರಾಷ್ಟ್ರ):ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್‌ ಅನ್ನು ಬಲವಂತವಾಗಿ ಕಸಿದು ಆಕೆಯನ್ನು ರೈಲಿನಿಂದ ಹೊರಗೆ ತಳ್ಳಿದ ಆರೋಪಡಿ ವ್ಯಕ್ತಿಯೊಬ್ಬನನ್ನು ದಾದರ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಚೌಧರಿ (32) ಬಂಧಿತ ಆರೋಪಿ

ಆ.6 ರಂದು ಸಂಜೆ 4 ಗಂಟೆ ಸುಮಾರಿಗೆ ಮಹಿಳಾ ಪ್ರಯಾಣಿಕರೊಬ್ಬರು ಪುಣೆ ರೈಲು ನಿಲ್ದಾಣದಿಂದ ಮುಂಬೈ ಸಿಎಸ್‌ಎಂಟಿ (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌) ರೈಲು ನಿಲ್ದಾಣಕ್ಕೆ ಉದ್ಯಾನ್ ಎಕ್ಸ್‌ಪ್ರೆಸ್ ಗಾರ್ಡ್ ಸೈಡ್ ಮಹಿಳಾ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಉದ್ಯಾನ್ ಎಕ್ಸ್‌ಪ್ರೆಸ್ ದಾದರ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 6 ಕ್ಕೆ ರಾತ್ರಿ 8:30ಕ್ಕೆ ಆಗಮಿಸಿತು. ಆಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ, ಕೆಂಪು ಮತ್ತು ಬಿಳಿ ಚೆಕ್ಡ್ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಹತ್ತಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಇಳಿಯಲು ಬಾಗಿಲಿನ ಬಳಿ ನಿಂತಿದ್ದಾಗ ಆರೋಪಿ ಮನೋಜ್ ಚೌಧರಿ ಮಹಿಳೆಗೆ ಕಿರುಕುಳ ನೀಡಿ ಆಕೆಯ ಬ್ಯಾಗ್​ನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆಕೆ ವಿರೋಧಿಸಿದಾಗ ಆರೋಪಿ ಕೋಪದಲ್ಲಿ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದಾನೆ. ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಡಿಸ್ಚಾರ್ಜ್ ಆದ ಬಳಿಕ ಸೋಮವಾರ ಬೆಳಗ್ಗೆ ಪೊಲೀಸರಿಗೆ ಆಕೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನ, ದರೋಡೆ ಮತ್ತು ಕಿರುಕುಳದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ನೋಡಿ ಆರೋಪಿ ಬಂಧನ: ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾದರ್ ರೈಲ್ವೆ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಈ ಅಪರಾಧದಲ್ಲಿ ಗಾಯಗೊಂಡ ದೂರುದಾರ ಮಹಿಳಾ ಪ್ರಯಾಣಿಕರ ಬಗ್ಗೆ ವಿಚಾರಣೆ ನಡೆಸಿದರು. ಅಲ್ಲದೇ, ದಾದರ್ ರೈಲು ನಿಲ್ದಾಣ ಮತ್ತು ಸಿಎಸ್‌ಎಂಟಿ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುವ ಮೊದಲು ಘಟನೆಯ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ, ಮಹಿಳಾ ಪ್ರಯಾಣಿಕರು ಆಗಸ್ಟ್ 7 ರಂದು ದಾದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಭಾರತೀಯ ಸಂವಿಧಾನದ ಸೆಕ್ಷನ್ 307, 394, 354 ಮತ್ತು ಸೆಕ್ಷನ್ 150 (1), (ಇ), ಭಾರತೀಯ ರೈಲ್ವೆ ಕಾಯಿದೆಯ 153, 137, 147, 162 ಅಡಿ ದೂರು ದಾಖಲಿಸಲಾಗಿದೆ. ಈ ಅಪರಾಧದ ಮುಂದಿನ ತನಿಖೆಯನ್ನು ದಾದರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸ್ಮಿತಾ ಧಾಕ್ನೆ ನಡೆಸುತ್ತಿದ್ದಾರೆ.

ಇದು ಮುಂಬೈನಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳಾ ರೈಲು ಪ್ರಯಾಣಿಕರ ಮೇಲೆ ಹಲ್ಲೆ ನಡೆದಿರುವ ಮೂರನೇ ಘಟನೆಯಾಗಿದೆ. ಹಿಂದಿನ ಘಟನೆಗಳು ಉಪನಗರ ರೈಲುಗಳಲ್ಲಿ ಸಂಭವಿಸಿದ್ದವು.

ಇದನ್ನೂ ಓದಿ:RPF Jawan: ಜೈಪುರ-ಮುಂಬೈ ರೈಲಿನಲ್ಲಿ ಗುಂಡು ಹಾರಿಸಿದ RPF ಕಾನ್ಸ್‌ಟೇಬಲ್‌; ನಾಲ್ವರು ಸಾವು!

Last Updated : Aug 8, 2023, 9:52 AM IST

ABOUT THE AUTHOR

...view details