ಕರ್ನಾಟಕ

karnataka

ETV Bharat / bharat

ಮನೆಗೆ ಕರೆದೊಯ್ಯುವಂತೆ ಗಂಡನ ಮನೆ ಎದುರು ಧರಣಿ ಕುಳಿತ ಮಹಿಳೆ - ವಿವಾಹಿತ ಮಹಿಳೆ ಪ್ರತಿಭಟನೆ

ಮನೆಗೆ ಕರೆದೊಯ್ಯುವಂತೆ ಗಂಡನ ಮನೆಯವರನ್ನು ಒತ್ತಾಯಿಸಿ ಸೊಸೆಯೊಬ್ಬರು ಪತಿ ಮನೆಯೆದುರು ಧರಣಿಗೆ ಕುಳಿತ ಘಟನೆ ಬಿಹಾರದ ಬೆಗುಸರಾಯ್ ನಲ್ಲಿ ನಡೆದಿದೆ.

begusarai
ಗಂಡನ ಮನೆಯೆದುರು ಧರಣಿ ಕುರಿತು ಮಹಿಳೆ

By

Published : Mar 10, 2021, 2:23 PM IST

ಬೆಗುಸರಾಯ್(ಬಿಹಾರ): ತನ್ನನ್ನು ಪತಿ ಮನೆಗೆ ಕರೆದೊಯ್ಯುವಂತೆ ವಿವಾಹಿತ ಮಹಿಳೆಯೊಬ್ಬರು ಧರಣಿ ಕುಳಿತಿರುವ ಘಟನೆ ಬಚ್ವಾರ ಪೊಲೀಸ್ ಠಾಣೆ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಪೂನಂ ಕುಮಾರಿ ಅವರು 31 ಮೇ 2020 ರಂದು ಪಿಂಟು ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಕೆಲಸ ಸಿಕ್ಕಿದ ಬಳಿಕ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಪಿಂಟು ಕುಮಾರ್ ಕುಟುಂಬಸ್ಥರು ಹೇಳಿದ್ದರು. ಆದರೆ, ಕೆಲಸ ಸಿಕ್ಕಿದ ಮೇಲೂ ಆಕೆಯನ್ನು ತವರು ಮನೆಯಿಂದ ಕರೆದುಕೊಂಡು ಹೋಗಿಲ್ಲ. ಈ ಹಿನ್ನೆಲೆ ಸಂತ್ರಸ್ತೆ ಪೂನಂ ಕುಮಾರಿ ಹಾಗೂ ಆಕೆಯ ಕುಟುಂಬಸ್ಥರು ಧರಣಿ ನಡೆಸುತ್ತಿದ್ದಾರೆ.

ಇನ್ನು ಮಗಳು ಪೂನಂ ಕುಮಾರಿಯನ್ನು ಅಳಿಯನ ಮನೆಗೆ ಕಳಿಸಲು ತೆರಳಿದ್ದ ವೇಳೆ ಆಕೆಯ ತಾಯಿ ಹಾಗೂ ಪೂನಂ ಇಬ್ಬರ ಮೇಲೆಯೂ ಆಕೆಯ ಅತ್ತೆ ಹಾಗೂ ಅತ್ತಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪೂನಂ ಪಾಂಡೆ ನಡುರಸ್ತೆಯಲ್ಲೇ ಗಂಡನ ಮನೆಯವರ ವಿರುದ್ಧ ಧರಣಿ ಕುಳಿತಿದ್ದಾರೆ.

ABOUT THE AUTHOR

...view details