ನೋಯ್ಡಾ:ಗಂಡನನ್ನು ಬಿಟ್ಟು ಲವರ್ನನ್ನು ಮದುವೆಯಾಗಿದ್ದ ಐದು ಮಕ್ಕಳ ತಾಯಿ ಮತ್ತೊಬ್ಬನ ಜೊತೆ ವಿವಾಹೇತರ ಸಂಬಂಧ ನಡೆಸುತ್ತಲೇ ತನ್ನ ಎರಡನೇ ಗಂಡನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಏನಿದು ಘಟನೆ?
ನೋಯ್ಡಾದ ಬದನ್ಯುವಿನ ನಿವಾಸಿ ಸುಶೀಲಾ ತನ್ನ ಮೊದಲನೇ ಗಂಡ ಲಾಲಾರಾಮ್ನನ್ನು ಬಿಟ್ಟು ಐದು ಮಕ್ಕಳೊಂದಿಗೆ ತನ್ನ ಪ್ರೇಮಿ ಸಂತ್ರಾಮ್ ಜೊತೆ ವಾಸಿಸುತ್ತಿದ್ದಳು. ಬಳಿಕ ಸಂತ್ರಾಮ್ ಜೊತೆ ಎರಡನೇ ಮದುವೆಯಾಗಿ ನಯಾ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಳು. ನಯಾ ಗ್ರಾಮದಲ್ಲಿ ಬದನ್ಯುವಿನ ನಿವಾಸಿ ಮನೋಜ್ ಜೊತೆ ಪರಿಚಯವಾಗಿದೆ. ಬಳಿಕ ಇಬ್ಬರು ಲವ್ನಲ್ಲಿ ಬಿದ್ದಿದ್ದಾರೆ.
ಮೇ 6ರಂದು ಮನೋಜ್ ಜೊತೆ ಸೇರಿ ಸುಶೀಲಾ ತನ್ನ ಎರಡನೇ ಗಂಡ ಸಂತ್ರಾಮ್ನನ್ನು ಕೊಲೆ ಮಾಡಿದ್ದಾಳೆ. ಬಳಿಕ ಏನೂ ತಿಳಿಯದಂತೆ ನಾಟಕವಾಡಿದ್ದಾಳೆ. ಮೇ 7ರಂದು ಸಂತ್ರಾಮ್ ಸಹೋದರ ಲಾಲು, ನನ್ನ ಸಹೋದರನನ್ನು ಕೊಲೆ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು.
ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಡುತ್ತಲೇ 2ನೇ ಗಂಡನನ್ನ ಕೊಂದ ಕಿರಾತಕಿ ಗುರುವಾರ ತನಿಖೆ ವೇಳೆ ಪೊಲೀಸರು ಆರೋಪಿ ಪತ್ನಿ ಸುಶೀಲಾ ಮತ್ತು ಆಕೆಯ ಲವರ್ ಮನೋಜ್ ಸೇರಿದಂತೆ ಒಟ್ಟು ನಾಲ್ವರನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಸುಶೀಲಾ ತನ್ನ ಎರಡನೇ ಗಂಡನನ್ನು ಲವರ್ ಜೊತೆ ಸೇರಿ ಕೊಲೆ ಮಾಡಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ.
ಸಂತ್ರಾಮ್ ಮತ್ತು ಸುಶೀಲಾ 18-20 ವರ್ಷಗಳ ಕಾಲ ಲವ್ನಲ್ಲಿದ್ದರು. ಸುಶೀಲಾ ತನ್ನ ಗಂಡ ಲಾಲಾರಾಮ್ನನ್ನು ಬಿಟ್ಟು ಲವರ್ ಸಂತ್ರಾಮ್ನನ್ನು ಮದುವೆಯಾಗಿದ್ದಳು. ಬಳಿಕ ಮನೋಜ್ ಜೊತೆ ಸುಶೀಲಾ ಮತ್ತೆ ಲವ್ನಲ್ಲಿ ಬಿದ್ದಿದ್ದಾಳೆ. ಲವರ್ ಜೊತೆ ಸೇರಿ ಸುಶೀಲಾ ತನ್ನ ಎರಡನೇ ಗಂಡನನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಕುರಿತು ನಾಲ್ವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಅಂಕುರ್ ಅಗ್ರವಾಲ್ ಹೇಳಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.