ರಾಯದುರ್ಗ(ತೆಲಂಗಾಣ): ರಸ್ತೆ ದಾಟುವಾಗ ನಾವು ಮಾಡುವ ಕೆಲವೊಂದು ಸಣ್ಣ - ಪುಟ್ಟ ತಪ್ಪುಗಳು ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಸದ್ಯ ಅಂತಹದೊಂದು ಘಟನೆ ತೆಲಂಗಾಣದ ರಾಯದುರ್ಗ ರೋಡ್ನಲ್ಲಿ ನಡೆದಿದೆ. ರಸ್ತೆ ದಾಟುವ ವೇಳೆ ಜಾಗರೂಕತೆಯಿಂದ ಇರುವಂತೆ ಜನರಲ್ಲಿ ಅರಿವು ಮೂಡಿಸುವ ಉದ್ಧೇಶದಿಂದ ಸೈಬರಾಬಾದ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದೇ ತಿಂಗಳ ಜೂನ್ 12ರಂದು ಈ ಘಟನೆ ನಡೆದಿದೆ. ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾಸ್ಕ್ ಹಾಕಿಕೊಂಡಿರುವ ಮಹಿಳೆಯೊಬ್ಬಳು ಅಜಾಗರೂಕತೆಯಿಂದ(ನಿರ್ಲಕ್ಷ್ಯ) ರಸ್ತೆ ದಾಟುತ್ತಿದ್ದ ವೇಳೆ ಅಪಘಾತಕ್ಕೊಳಗಾಗಿದ್ದಾಳೆ. ಗಾಯಗೊಂಡಿರುವ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ರಸ್ತೆ ವಿಭಜಕ ದಾಟುತ್ತಿದ್ದ ವೇಳೆ ನಿರ್ಲಕ್ಷ್ಯ ವಹಿಸಿರುವ ಮಹಿಳೆ ವಾಹನ ಬರುತ್ತಿರುವುದನ್ನ ಸರಿಯಾಗಿ ಗಮನಿಸಿಲ್ಲ. ಹೀಗಾಗಿ ಬೈಕ್ವೊಂದಕ್ಕೆ ಆಕೆ ಡಿಕ್ಕಿ ಹೊಡೆದಿದ್ದಾಳೆ. ಪರಿಣಾಮ ನಡು ರಸ್ತೆಯಲ್ಲೇ ಬಿದ್ದಿದ್ದಾಳೆ.