ಕರ್ನಾಟಕ

karnataka

ETV Bharat / bharat

ಸಾರಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಮುಕನಿಂದ ಕಿರುಕುಳ.. ಫೇಸ್​ಬುಕ್​ನಲ್ಲಿ ವಿಡಿಯೋ ಸಹಿತ ಘಟನೆ ಬಿಚ್ಚಿಟ್ಟ ಶಿಕ್ಷಕಿ - ಸಾರಿಗೆ ಬಸ್​ನಲ್ಲಿ ಕಿರುಕುಳ

Woman molested in Kerala government bus.. ಬಸ್​​ ತ್ರಿಶೂರ್‌ ತಲುಪಿದಾಗ ಹಿಂದಿನ ಸೀಟ್​ನಲ್ಲಿ ಕುಳಿತಿದ್ದ ಆರೋಪಿ ಕಿರುಕುಳ ನೀಡಲು ಶುರು ಮಾಡಿದ. ಈ ಬಗ್ಗೆ ಬಸ್​ ಕಂಡಕ್ಟರ್​ ಗಮನಕ್ಕೆ ತರಲಾಯಿತು. ಆದರೆ, ಇದನ್ನು ಕಂಡಕ್ಟರ್​ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿ ಮಹಿಳೆ ಫೇಸ್​ಬುಕ್​ನಲ್ಲಿ ವಿಡಿಯೋ ಸಮೇತ ಬರೆದುಕೊಂಡಿದ್ದಾಳೆ.

bus
bus

By

Published : Mar 6, 2022, 5:53 PM IST

ಕೋಯಿಕ್ಕೋಡ್​(ಕೇರಳ): ಸಾರಿಗೆ ಬಸ್​​ನಲ್ಲಿ ಸಂಚರಿಸುತ್ತಿದ್ದಾಗ ಸಹ ಪ್ರಯಾಣಿಕನೋರ್ವ ತನಗೆ ಕಿರುಕುಳ ನೀಡಿದ್ದಾನೆ ಎಂದು ಶಿಕ್ಷಕಿಯೊಬ್ಬರು ಆರೋಪಿಸಿ ಫೇಸ್​ಬುಕ್​ ಪೋಸ್ಟ್ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವರು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಕೇರಳದ ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ತಿರುವನಂತಪುರಂನಲ್ಲಿ ಶಿಕ್ಷಕಿ ಬಸ್ ಹತ್ತಿದ್ದರು. ಇವರ ಹಿಂದೆ ಆರೋಪಿಯು ಬಸ್​ ಹತ್ತಿ ಹಿಂದಿನ ಸೀಟ್​​ನಲ್ಲಿ ಕುಳಿತಿದ್ದ ಎನ್ನಲಾಗಿದೆ.

ಬಸ್​​ ತ್ರಿಶೂರ್‌ ತಲುಪಿದಾಗ ಹಿಂದಿನ ಸೀಟ್​ನಲ್ಲಿ ಕುಳಿತಿದ್ದ ಆರೋಪಿ ಕಿರುಕುಳ ನೀಡಲು ಶುರು ಮಾಡಿದ. ಈ ಬಗ್ಗೆ ಬಸ್​ ಕಂಡಕ್ಟರ್​ ಗಮನಕ್ಕೆ ತರಲಾಯಿತು. ಆದರೆ, ಇದನ್ನು ಕಂಡಕ್ಟರ್​ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಶಿಕ್ಷಕಿ ಆರೋಪಿಸಿ ಭಾನುವಾರ ಬೆಳಗ್ಗೆ ಫೇಸ್​ಬುಕ್​ನಲ್ಲಿ ವಿಡಿಯೋ ಹಾಕಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ಕಿರುಕುಳ.. ಎಚ್ಚೆತ್ತುಕೊಂಡ ಸರ್ಕಾರದಿಂದ ದಿಟ್ಟ ಹೆಜ್ಜೆ

ಅಲ್ಲದೇ, ಆರೋಪಿಯು ಕ್ಷಮೆ ಕೇಳಿದ. ಇದರಿಂದ ಇದನ್ನು ಅಲ್ಲಿಗೆ ಬಿಡಲಾಯಿತು ಎಂದೂ ಹೇಳಿಕೊಂಡಿದ್ದಾರೆ. ಇತ್ತ, ವಿಷಯ ತಿಳಿದ ಸಾರಿಗೆ ಸಚಿವ ಆಂಟನಿ ರಾಜು, ಬಸ್​ನಲ್ಲಿ ಮಹಿಳೆಯೊಂದಿಗೆ ನಡೆದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು. ಜತೆಗೆ ಈ ಘಟನೆಯಲ್ಲಿ ಕಂಡಕ್ಟರ್​​ ತಪ್ಪು ಅಥವಾ ಬೇಜವಾಬ್ದಾರಿ ಕಂಡು ಬಂದರೂ ಆತನ ವಿರುದ್ಧವೂ ಸೂಕ್ತ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details