ಬರೇಲಿ (ಉತ್ತರ ಪ್ರದೇಶ): ಗಂಡನಿಂದ ತ್ರಿವಳಿ ತಲಾಖ್ ಪಡೆದ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಪದ್ಧತಿಯಂತೆಯೇ ಮತ್ತೊಂದು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರ ಈ ವಿಶೇಷ ಮದುವೆ ಜರುಗಿದೆ.
ರಾಂಪೂರ್‌ನ ದಾರ್ಸಲ್ ನಿವಾಸಿ ರುಬಿನಾ ಖಾನ್ ಎಂಬ ಮಹಿಳೆ 9 ವರ್ಷಗಳ ಹಿಂದೆ ಉತ್ತರಾಖಂಡದ ಹಲ್ದ್ವಾನಿ ನಿವಾಸಿ ಶೋಯೆಬ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ವಾಹನ ಚಾಲಕರಾಗಿರುವ ಶೋಯೆಬ್ ತನ್ನ ಕುಟುಂಬವನ್ನು ನಡೆಸುತ್ತಿದ್ದರು. ಹಾಗೆ ರುಬಿನಾ ಮತ್ತು ಶೋಯೆಬ್ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ.
ತ್ರಿವಳಿ ತಲಾಖ್... ಹಿಂದೂ ಪದ್ಧತಿಯಂತೆ 'ಪ್ರೇಮ್' ಮದುವೆಯಾದ ಮುಸ್ಲಿಂ ಮಹಿಳೆ ಆದರೆ, ಪತಿ ಶೋಯೆಬ್ ತನಗೆ ಥಳಿಸುತ್ತಿದ್ದರು. ಯಾರೊಂದಿಗಾದರೂ ಮಾತನಾಡಿದರೂ ಎಂದು ನನ್ನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು ಎಂದು ರುಬಿನಾ ಆರೋಪಿಸಿದ್ದಾರೆ. ಇದೇ ವಿಷಯವಾಗಿ ಒಂದು ವಾರದ ಹಿಂದೆ ತ್ರಿವಳಿ ತಲಾಖ್ ನೀಡಿ ಶೋಯೆಬ್ ರುಬಿನಾರನ್ನು ಮನೆಯಿಂದ ಹೊರಹಾಕಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಗಂಡ!
ಪತಿಯ ಸ್ನೇಹಿತನೊಂದಿಗೆ ರುಬಿಯಾ ಸ್ನೇಹ: ಶೋಯೆಬ್ಗೆ ಉತ್ತರ ಪ್ರದೇಶದ ಬರೇಲಿಯ ನವಾಬ್ ಗಂಜ್ ನಿವಾಸಿಯಾದ ಪ್ರೇಮ್‌ಪಾಲ್ ಗಂಗ್ವಾರ್ ಎಂಬ ಗೆಳೆಯನಿದ್ದರು. ಪ್ರೇಮ್‌ಪಾಲ್ ವಾಹನ ಚಾಲಕರಾಗಿದ್ದು, ಶೋಯೆಬ್ರನ್ನು ಭೇಟಿಯಾಗುತ್ತಿದ್ದರು. ಹೀಗೆ ನಾಲ್ಕೈದು ವರ್ಷಗಳ ಹಿಂದೆ ರುಬಿನಾರೊಂದಿಗೂ ಪ್ರೇಮ್‌ಪಾಲ್ ಸ್ನೇಹ ಬೆಳೆದಿದೆ. ಈ ಸ್ನೇಹ ಪ್ರೇಮ ಸಂಬಂಧವಾಗಿಯೂ ಮಾರ್ಪಟ್ಟಿತು ಮತ್ತು ಇಬ್ಬರೂ ರಹಸ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.
ಇದೇ ವಿಷಯ ತಿಳಿದು ಶೋಯೆಬ್ ಪತ್ನಿ ರುಬಿನಾ ಖಾನ್ ಜೊತೆಗೆ ಜಗಳವಾಡಿ ತಲಾಖ್ ಎಂದು ಹೇಳಲಾಗುತ್ತಿದೆ. ಪತಿ ತಲಾಖ್ ನೀಡಿದ ತಕ್ಷಣ ಪ್ರೇಮ್ಪಾಲ್ರನ್ನು ರುಬಿನಾ ಸಂಪರ್ಕಿಸಿದ್ದಾರೆ. ಅಂತೆಯೇ ಬರೇಲಿಗೆ ಬಂದ ರುಬಿನಾ ತನ್ನ ಪ್ರಿಯಕರ ಪ್ರೇಮ್‌ಪಾಲ್ ಅವರನ್ನು ವಿವಾಹವಾಗಿದ್ದಾರೆ.
ರುಬಿನಾ ಖಾನ್ ಹೋಗಿ ಪುಷ್ಪಾ: ಪ್ರೇಮ್ಪಾಲ್ರನ್ನು ವರಿಸುವ ಮುನ್ನ ರುಬಿನಾ ಖಾನ್ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಅಲ್ಲದೇ, ತನ್ನ ಹೆಸರನ್ನು ಪುಷ್ಪಾ ಎಂದು ಬದಲಾಯಿಸಿಕೊಂಡು ಹಿಂದೂ ಪದ್ಧತಿಯಂತೆ ನಡೆಯಿತು ಪ್ರೇಮ್ಪಾಲ್ರನ್ನು ಮದುವೆಯಾಗಿದ್ದಾರೆ.
ಇದನ್ನೂ ಓದಿ:ಮಥುರಾ ಕ್ಷೇತ್ರದಿಂದ ಕಂಗನಾ ರಾಜಕೀಯ ಸುಳಿವು: ಒಳ್ಳೆಯ ವಿಚಾರವೆಂದ ಹೇಮಾ ಮಾಲಿನಿ