ಬರೇಲಿ(ಉತ್ತರಪ್ರದೇಶ) :ಇಲ್ಲಿನ ಮುಸ್ಲಿಂ ಯುವತಿ ತನ್ನ ಹಿಂದೂ ಸಂಗಾತಿಯೊಂದಿಗೆ ಮದುವೆ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋಗಳನ್ನು ಬಿಡುಗಡೆ ಮಾಡಿ ತನ್ನ ಭದ್ರತೆಯನ್ನು ಖಾತ್ರಿಪಡಿಸಿಕೊಂಡಿದ್ದಾಳೆ. ಆಕೆಯ ಪ್ರಕಾರ ತನಗೆ ಮತ್ತು ತನ್ನ ಗಂಡನ ಜೀವಕ್ಕೆ ಬೆದರಿಕೆ ಇದೆ ಎನ್ನಲಾಗಿದೆ.
ಮೂಲತಃ ಲುಬ್ನಾ ಎಂದು ಕರೆಯಲ್ಪಡುವ ಹುಡುಗಿ ಮೇ 20ರಂದು ತನ್ನ ದೀರ್ಘಕಾಲದ ಹಿಂದೂ ಗೆಳೆಯನನ್ನು ವಿವಾಹವಾಗಿದ್ದಾರೆ. ಲುಬ್ನಾ ಈಗ ತನ್ನ ಹೆಸರನ್ನು ಆರೋಹಿ ಎಂದು ಬದಲಾಯಿಸಿಕೊಂಡಿದ್ದಾರೆ. ಮದುವೆಯಾಗುವ ಮೊದಲು ಮೂರು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು.
ಹಾಗೆ ಬರೇಲಿಯ ಕೊತ್ವಾಲಿ ಪ್ರದೇಶದಲ್ಲಿ ಅವರು ವಾಸಿಸುತ್ತಿದ್ದರು. ಸಾಮಾಜಿಕ ಕಳಂಕಕ್ಕೆ ಹೆದರಿ ಇವರು ತಮ್ಮ ಪ್ರೀತಿಯ ಸಂಬಂಧವನ್ನು ಮುಚ್ಚಿಟ್ಟಿದ್ದರು. ಧೈರ್ಯ ತಂದುಕೊಂಡು ಈಗ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹ :ಲುಬ್ನಾ ತನ್ನ ಮನೆಯಿಂದ ಓಡಿ ಹೋಗಿ ಇಲ್ಲಿನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಈ ನಡೆಯಿಂದ ತಮ್ಮ ಪ್ರಾಣವೇ ಹೋಗಬಹುದು ಎಂದು ತಿಳಿದಿದ್ದರೂ ಪ್ರೇಮಿಗಳು ದಿಟ್ಟ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಆದಾಗ್ಯೂ, ಲುಬ್ನಾ ತನ್ನ ಮದುವೆಯ ಮೆರವಣಿಗೆಯ ವಿಡಿಯೋವನ್ನು ಮಾಡಿಕೊಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿ, ಪೊಲೀಸ್ ರಕ್ಷಣೆಗೆ ಒತ್ತಾಯಿಸಿದ್ದಾರೆ. ಹೀಗೆ ಮಾಡುವ ಮೂಲಕ ತನಗೆ ಅಥವಾ ತನ್ನ ಪತಿಗೆ ಏನಾದರೂ ಸಂಭವಿಸಿದರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಪೊಲೀಸರು ಮತ್ತು ಜನರಿಗೆ ತಿಳಿಯುತ್ತದೆ ಎಂಬುದು ಯುವತಿಯ ಬುದ್ಧಿವಂತಿಕೆಯ ನಡೆಯಾಗಿದೆ.
ಅಂತರ್‌ಧರ್ಮೀಯ ವಿವಾಹ : ವಿಡಿಯೋ ವೈರಲ್ ಮಾಡಿ ರಕ್ಷಣೆಗೆ ಮೊರೆಯಿಟ್ಟ ಯುವತಿ! ಜೀವಕ್ಕೆ ಅಪಾಯ :ಕಟ್ಟುನಿಟ್ಟಾಗಿ ಧರ್ಮವನ್ನು ಅನುಸರಿಸುವ ಆಕೆಯ ಪೋಷಕರು ಅಂತರ್ಧರ್ಮೀಯ ವಿವಾಹದಿಂದಾಗಿ ತನ್ನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದೇವೆ, ಮದುವೆ ಒಮ್ಮತದ ನಿರ್ಧಾರವಾಗಿದೆ. ಇದರಿಂದ ಯಾರಿಗೂ ಸಮಸ್ಯೆಯಾಗಬಾರದು ಎಂದು ಆಕೆಯ ಪತಿ ಅಭಿಪ್ರಾಯಪಟ್ಟಿದ್ದಾರೆ.
ಕೋಟ್ವಾಲಿಯಲ್ಲಿ ಹುಡುಗಿಯ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಮಾಹಿತಿ ನೀಡಿದ್ದಾರೆ. ಆದರೆ, ಹುಡುಗಿಯ ಮದುವೆಯ ವಿಡಿಯೋ ವೈರಲ್ ಆಗಿದೆ. ಇದರ ನಡುವೆ ಯುವತಿಗೆ ಪೊಲೀಸರು ಸಂಪೂರ್ಣ ರಕ್ಷಣೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಬಿಐ ಮೇಲೆ ಆರೋಪ ಮಾಡೋರಿಗೆ ಕೋರ್ಟ್ ಮೇಲೆ ವಿಶ್ವಾಸವಿಲ್ಲ ಎಂದರ್ಥ: ಸಚಿವ ನಾರಾಯಣಸ್ವಾಮಿ