ಜೋಧಪುರ್(ರಾಜಸ್ಥಾನ): ಕಳೆದ ಕೆಲ ದಿನಗಳ ಹಿಂದೆ ಕಾರಿನಲ್ಲಿ ಮಾಸ್ಕ್ ಹಾಕಿಕೊಳ್ಳದೇ ಬಂದಿದ್ದ ಮಹಿಳೆಯೊಬ್ಬರು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಇಂತಹದೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ರೈಲ್ವೆ ನಿಲ್ದಾಣದಲ್ಲಿ ಯುವತಿ ಹೈಡ್ರಾಮಾ ರಾಜಸ್ಥಾನದ ಜೋಧಪುರ್ನಲ್ಲಿ ಈ ಘಟನೆ ನಡೆದಿದ್ದು, ಭೋಪಾಲ್ನಿಂದ ಜೋಧಪುರ್ಕ್ಕೆ ಆಗಮಿಸಿದ್ದ ಯುವತಿ ರೈಲ್ವೆ ಸ್ಟೇಷನ್ನಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವ ಉದ್ದೇಶದಿಂದ ಸ್ಯಾಂಪಲ್ ನೀಡಲು ನಿರಾಕರಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ಅಲ್ಲಿನ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಸಿಗದ ಕೋವಿಡ್ ಚಿಕಿತ್ಸೆ.. ತಾಯಿ ಮಡಿಲಿನಲ್ಲೇ ಪ್ರಾಣ ಬಿಟ್ಟ ಮಗ!
ರೈಲ್ವೆ ಸಿಬ್ಬಂದಿ ಮತ್ತು ಜಿಆರ್ಪಿ ಪೊಲೀಸರು ಯುವತಿಯ ವಿವರಣೆ ಕೇಳಲು ಮುಂದಾಗಿದ್ದು, ಇದಕ್ಕೆ ಆಕೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆಕೆ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಭೋಪಾಲ್ ಎಕ್ಸ್ಪ್ರೆಸ್ನಲ್ಲಿ ಯುವತಿಯೊಬ್ಬಳು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಜೋಧ್ಪುರಕ್ಕೆ ಬಂದಿದ್ದರು. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ವೇಳೆ ಮಹಿಳೆಯ ಸ್ಯಾಂಪಲ್ ಪಡೆದುಕೊಳ್ಳಲು ಮುಂದಾಗಿದ್ದು, ಆಕೆ ನಿರಾಕರಿಸಿದ್ದಾಳೆ.
ಸುಮಾರು 1 ಗಂಟೆಗಳ ಕಾಲ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ಡ್ರಾಮಾ ಸೃಷ್ಟಿ ಮಾಡಿದ್ದಾಳೆ. ಈ ವೇಳೆ ಲೇಡಿ ಕಾನ್ಸ್ಟೇಬಲ್ ಸ್ಥಳಕ್ಕೆ ತಲುಪಿ ಆಕೆಗೆ ವಿವರಣೆ ನೀಡಿದ್ದು, ಇದಾದ ಬಳಿಕ ಪರೀಕ್ಷೆಗೆ ಒಪ್ಪಿಕೊಂಡಿದ್ದಾಳೆ.