ಪಿಥೋರಗಢ/ಉತ್ತರಾಖಂಡ: ಇಂಡೋ - ಚೀನಾ ಗಡಿ ಸಮೀಪದಲ್ಲಿರುವ ನಿಷೇಧಿತ ಪ್ರದೇಶವಾದ ನಾಭಿದಂಗ್ ಬಳಿ ಲಖನೌದ ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಮಹಿಳೆಯೊಬ್ಬರು ವಾಸಿಸುತ್ತಿದ್ದು, ತಾನು ಪಾರ್ವತಿ ದೇವಿಯ ಅವತಾರ ಹಾಗೂ ಕೈಲಾಸ ಪರ್ವತದಲ್ಲಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡುವ ಮೂಲಕ ಗಡಿಯಿಂದ ವಾಪಸ್ ಬರಲು ನಿರಾಕರಿಸಿದ್ದಾರೆ.
ಭಾರತ - ಚೀನಾ ಗಡಿ ಬಳಿಯ ನಿಷೇಧಿತ ಪ್ರದೇಶದಲ್ಲಿ ಹರ್ಮಿಂದರ್ ಸಿಂಗ್ ಎಂಬ ಮಹಿಳೆ ನೆಲೆಸಿದ್ದು, ಮನೆಗೆ ಮರಳಲು ನಿರಾಕರಿಸಿದ್ದಾರೆ. ತಾನು ಪಾರ್ವತಿ ದೇವಿಯ ಅವತಾರವೆಂದೂ, ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾಳೆ. ಇಲ್ಲಿನ ಆಡಳಿತವು ಹರ್ಮಿಂದರ್ ಸಿಂಗ್ನನ್ನು ವಾಪಸ್ ಕಳುಹಿಸಲು ಪ್ರಯತ್ನಿಸಿತು. ಆದರೆ, ಮಹಿಳೆ ಬಲವಂತವಾಗಿ ಹೊರಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ತೆರಳಿದ್ದ ಪೊಲೀಸ್ ತಂಡ ಬರಿಗೈಯಲ್ಲಿ ಮರಳಿದೆ ಎಂದು ಪಿಥೋರಗಢ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ.