ಕರ್ನಾಟಕ

karnataka

ETV Bharat / bharat

‘ನಾನೊಬ್ಬಳು ಲೈಂಗಿಕ ಕಾರ್ಯಕರ್ತೆ’.. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದ ಮಹಿಳೆ! - ಲೈಂಗಿಕ ಕಾರ್ಯಕರ್ತೆ ಏರಿಯಲ್​ ಎಗೋಝಿ ಹೇಳಿಕೆ

ಸಾಮಾಜಿಕ ಮಾಧ್ಯಮದಲ್ಲಿ 9,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಹಿಳೆಯೊಬ್ಬರು ತಮ್ಮ LinkedIn ಪ್ರೊಫೈಲ್‌ನಲ್ಲಿ ಪೋಸ್ಟ್​​ ಅನ್ನು ಸೆಕ್ಸ್​ ವರ್ಕ್​ ಎಂದು ಬರೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Woman proudly explains reason for adding sex work as experience  Arielle Egozi statement  LinkedIn news  ಲೈಂಗಿಕ ಕಾರ್ಯಕರ್ತೆ ಎಂದು ಬರೆದುಕೊಂಡ ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಫಿದಾ  ಲೈಂಗಿಕ ಕಾರ್ಯಕರ್ತೆ ಏರಿಯಲ್​ ಎಗೋಝಿ ಹೇಳಿಕೆ  ಲಿಂಕ್ಡ್​ಇನ್​ ಸುದ್ದಿ
‘ನಾನೊಬ್ಬಳು ಲೈಂಗಿಕ ಕಾರ್ಯಕರ್ತೆ

By

Published : Jul 13, 2022, 2:18 PM IST

ನವದೆಹಲಿ:ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್ ಅನ್ನು ಸಾಮಾನ್ಯವಾಗಿ ವೃತ್ತಿಪರ ಸೈಟ್ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಜನರು ಉದ್ಯೋಗಗಳನ್ನು ಹುಡುಕುತ್ತಾರೆ ಮತ್ತು ಕೆಲಸಕ್ಕಾಗಿ ತಮ್ಮ ಪ್ರೊಫೈಲ್ ಅನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಉದ್ಯೋಗದಾತರು ಅವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಉದ್ಯೋಗವನ್ನು ನೀಡಬಹುದಾಗಿದೆ. ಆದರೆ ಮಹಿಳೆಯೊಬ್ಬರು ತಮ್ಮ ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ತಮ್ಮ ಇತರ ಕೆಲಸದ ಅನುಭವಗಳೊಂದಿಗೆ ಲೈಂಗಿಕ ಕೆಲಸದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದರ ಬಗ್ಗೆ ವಿಶ್ವದಾದ್ಯಂತ ಜನರು ಈ ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ.

ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಸುಮಾರು ಹತ್ತು ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯು ತೋರಿರುವ ಧೈರ್ಯವನ್ನು ಮೆಚ್ಚಿದ್ದಾರೆ. ಲೈಂಗಿಕ ಕೆಲಸವು ಕಾನೂನುಬದ್ಧವಾಗಿರುವ ದೇಶಗಳಲ್ಲಿಯೂ ಸಹ ಲೈಂಗಿಕ ಕೆಲಸವನ್ನು ಗೌರವಾನ್ವಿತ ವೃತ್ತಿಯಾಗಿ ಪರಿಗಣಿಸದ ಕಾರಣ ಮಹಿಳೆಯರು ಇದರ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ.

ಓದಿ:ಈ ವರ್ಷ ಶೇ.82ರಷ್ಟು ವೃತ್ತಿಪರರು ಉದ್ಯೋಗ ಬದಲಾಯಿಸೋ ಯೋಚನೆಯಲ್ಲಿದ್ದಾರೆ: ಲಿಂಕ್ಡ್‌ಇನ್ ವರದಿ

ಲೈಂಗಿಕ ಕಾರ್ಯಕರ್ತೆ ಎಂದು ಬರೆದ್ದಿದ್ದೇಕೆ?: ಈ ಮಹಿಳೆ ತನ್ನ ಕೆಲಸ ಸೆಕ್ಸ್​ ವರ್ಕ್​ ಎಂದು ಪೋಸ್ಟ್‌ನಲ್ಲಿ ಬರೆಯಲು ಕಾರಣವನ್ನು ಸಹ ನೀಡಿದ್ದಾರೆ. ನಾನು ಎರಡು ವಾರಗಳ ಹಿಂದೆ ಆಂತರಿಕ ಕೆಲಸವನ್ನು ತೊರೆದಿದ್ದೇನೆ. ನಾನು ಲೈಂಗಿಕ ಕೆಲಸ ಮಾಡಬಹುದೆಂಬ ಕಾರಣಕ್ಕಾಗಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಅದನ್ನು ಇಷ್ಟಪಡದ ಜನರಿಂದ ನಿರಾಕರಣೆ ತೆಗೆದುಕೊಳ್ಳುವ ಸಮಸ್ಯೆ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೆಟ್ಟಿಗರು ಪ್ರತಿಕ್ರಿಯೆ: ಮಹಿಳೆ ಶೇರ್ ಮಾಡಿರುವ ಪೋಸ್ಟ್​ಗೆ ನೆಟಿಜನ್ಸ್​ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, ನಾವು ಗರ್ಭಪಾತದ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಆದಾಯವನ್ನು ಗಳಿಸಲು ತನ್ನ ದೇಹವನ್ನು ಬಳಸುವ ಮಹಿಳೆಯ ಹಕ್ಕಿನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 1.5 ಸಾವಿರ ಜನರು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸ್ಪಷ್ಟನೆ- ಈ ಸುದ್ದಿ ಯಾವುದೇ ರೀತಿಯಲ್ಲಿ, ಯಾರನ್ನೇ ಸೆಕ್ಸ್​ ವರ್ಕ್​ಗೆ ಪ್ರಚೋದಿಸುವ ಉದ್ದೇಶ ಹೊಂದಿಲ್ಲ. ಓರ್ವ ಮಹಿಳೆ ಬಹಿರಂಗವಾಗಿ ತನ್ನ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ಪೋಸ್ಟ್​ ಹಾಕಿದ್ದನ್ನು ಮಾತ್ರ ಪ್ರಕಟಿಸಲಾಗಿದೆ. ಮಹಿಳೆಯ ಹೆಸರನ್ನು ಈ ಸುದ್ದಿಯಲ್ಲಿ ಗೌಪ್ಯವಾಗಿಡಲಾಗಿದೆ.

ABOUT THE AUTHOR

...view details